ಹೀಟ್ ವೇವ್ಸ್ ಜೊತೆಗೆ ಅತಿಸಾರ ಪ್ರಕರಣಗಳ ಏರಿಕೆ, ರಾಜಧಾನಿಯಲ್ಲಿ ಹೆಚ್ಚಾಯ್ತು ಡಯೇರಿಯಾ ಆರ್ಭಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬೇಸಿಗೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಂತಹ ರಾಜ್ಯಗಳಲ್ಲಿ ಸುಡು ಬಿಸಿಲು ಜನರ ಮೈಮೇಲೆ ಬೀಳುತ್ತಿದೆ. ತೀವ್ರ ಬಿಸಿಲಿನ ಝಳದ ಜೊತೆಗೆ ಅತಿಸಾರ ರೋಗಗಳೂ ಹೆಚ್ಚುತ್ತಿವೆ.

ಉರಿ ಬಿಸಿಲಿನಿಂದ ಹೀಟ್ ಸ್ಟ್ರೋಕ್ ಆಗುವ ಆತಂಕವಿದ್ದರೆ ಆರೋಗ್ಯಕ್ಕೆ ಹಾನಿಯಾಗುವ ಆತಂಕವೂ ಇದೆ. ಮತ್ತೊಂದೆಡೆ ತಾಪಮಾನ ಹೆಚ್ಚಳದಿಂದ ವಾಂತಿ, ಬೇಧಿಯಿಂದ ಬಳಲುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಹಠಾತ್ ಹವಾಮಾನ ಬದಲಾವಣೆಯಿಂದ ಮತ್ತಷ್ಟು ಆರೋಗ್ಯ ಸಮಸ್ಯೆ ಉಂಟಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಅತಿಸಾರ, ಭೇದಿ ಪ್ರಕರಣಗಳು ಹೆಚ್ಚಾಗುತ್ತಿವೆ. ಸಿಲಿಕಾನ್ ಸಿಟಿ ಬೆಂಗಳೂರು ಒಳಗೊಂಡಂತೆ ರಾಜ್ಯದಲ್ಲಿ ಕಲುಷಿತ ನೀರು, ಅತಿಯಾದ ಆಹಾರ ಸೇವನೆ, ಬಿಸಿಲಿನಿಂದಾಗಿ ಅತಿಸಾರ ಭೇದಿ ಪ್ರಕರಣಗಳು ದಾಖಲಾಗಿವೆ.

ಬೆಂಗಳೂರಿನಲ್ಲಿ ಕಳೆದ ವಾರದಲ್ಲಿ 4,450 ಅತಿಸಾರ ಪ್ರಕರಣಗಳು ದಾಖಲಾಗಿವೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಅತಿಸಾರದಿಂದ ಬಳಲುತ್ತಿರುವವರ ಸಂಖ್ಯೆ 52 ಸಾವಿರಕ್ಕೂ ಅಧಿಕ. ಕಳೆದೊಂದು ವಾರದಿಂದ ಅತಿಸಾರ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.

ಹೆಚ್ಚುತ್ತಿರುವ ತಾಪಮಾನದಿಂದಾಗಿ, ಹವಾಮಾನ ಬದಲಾವಣೆಯು ಅತಿಸಾರ ರೋಗಗಳ ಹರಡುವಿಕೆಯನ್ನು ಹೆಚ್ಚಿಸುತ್ತಿದೆ. ಹಾಸನ ಜಿಲ್ಲೆಯಲ್ಲಿ ಅತಿಸಾರ ಪ್ರಕರಣಗಳು ಹೆಚ್ಚಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇದರ ಆಧಾರದ ಮೇಲೆ ಆರೋಗ್ಯ ಇಲಾಖೆ ಕೂಡ ಈ ಭಾಗದಲ್ಲಿ ನೀರು ಪೂರೈಕೆ ಕುರಿತು ತನಿಖೆ ಆರಂಭಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!