ಅಬೆಗೆ ಗುಂಡೇಟು ಬಿತ್ತೇ? ಹೃದಯಾಘಾತವಾಯ್ತೇ??

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗಂಭೀರ ಸ್ಥಿತಿಯಲ್ಲಿ ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಆಸ್ಪತ್ರೆಗೆ ದಾಖಲಾಗಿರುವ ಬೆನ್ನಿಗೇ ನಾರಾ ನಗರದಲ್ಲಿ ನಡೆದ ಘಟನೆ ಹಲವು ಗೊಂದಲಗಳನ್ನು ಹುಟ್ಟುಹಾಕಿದೆ. ಅಬೆ ಮೇಲೆ ನಡೆದಿರುವುದು ಗುಂಡಿನ ದಾಳಿಯೇ? ಅಥವಾ ಅವರು ಹೃದಯಾಘಾತಕ್ಕೆ ಒಳಗಾಗಿ ಕುಸಿದರೇ ಎಂಬ ಶಂಕೆಯೂ ಕಾಡುತ್ತಿದೆ.

ಜಪಾನ್‌ನ ಮಾಧ್ಯಮ ವರದಿಗಳ ಪ್ರಕಾರ, ಅಬೆ ಶುಕ್ರವಾರ ಭಾಷಣ ಮಾಡುತ್ತಿದ್ದಾಗ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದಾನೆ. ಬಳಿಕ ಅಬೆ ಕುಸಿದುಬಿದ್ದಿದ್ದಾರೆ. ಅಲ್ಲಿದ್ದ ವರದಿಗಾರರು ಅಬೆಗೆ ರಕ್ತಸ್ರಾವವಾಗುತ್ತಿರುವುದು ಹಾಗೂ ಅದಕ್ಕೂ ಮುನ್ನ ಗುಂಡೇಟಿನಂತೆ ಸದ್ದು ಕೇಳಿಸಿಜೊಂಡಿರುವುದನ್ನು ಖಚಿತ ಪಡಿಸಿದ್ದಾರೆ.

ಆದರೆ ಈ ನಡುವೆ ಸ್ಥಳೀಯ ಅಗ್ನಿಶಾಮಕ ಇಲಾಖೆ, ಮಾಜಿ ಪ್ರಧಾನಿ ಅಬೆ ಅವರು ಹೃದಯಾಘಾತಕ್ಕೆ ಒಳಗಾದ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದೆ. ಈ ಹೇಳಿಕೆ ಈಗ ಗೊಂದಲಕ್ಕೆ ಕಾರಣವಾಗಿದೆ. ಈ ನಡುವೆ ಶಂಕಿತನ ಬಂಧನವಾಗಿದ್ದು, ವಿಚಾರಣೆ ಬಳಿಕ ನೈಜಾಂಶ ಹೊರಬರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!