ಮರಣ ಮೃದಂಗ ಬಾರಿಸುತ್ತಿದ್ದ ರಸ್ತೆ ಗುಂಡಿಗೆ ಸೋಗೆ ಇಟ್ಟು ಪ್ರತಿಭಟಿಸಿದ ಸ್ಥಳೀಯರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉಡುಪಿ ರಸ್ತೆಯಲ್ಲಿ ಬಾಯ್ತೆರೆದಿದ್ದ ಯಮಗಾತ್ರದ ಗುಂಡಿಯೊಂದಕ್ಕೆ ಸಾರ್ವಜನಿಕು ತೆಂಗಿನ ಮರದ ಸೋಗೆ, ಮರದ ತುಂಡುಗಳನ್ನು ಅಡ್ಡವಾಗಿಟ್ಟು ಅಧಿಕಾರಿಗಳ ವಿರುದ್ದ ಗುರುವಾರ ವಿಪರೀತ ಮಳೆಯಲ್ಲೇ ಪ್ರತಿಭಟನೆ ನಡೆಸಿದ್ದಾರೆ.

ಕರಾವಳಿ ಬೈಪಾಸ್ ನಿಂದ ಮಲ್ಪೆಯನ್ನು ಕೂಡುವ ಮುಖ್ಯ ರಸ್ತೆಯ ಪಂದುಬೆಟ್ಟು ಎಂಬಲ್ಲಿ ರಸ್ತೆ ಮಧ್ಯೆ ಬೃಹತ್ ಗಾತ್ರದ ಹೊಂಡವೊಂದು ಬಾಯ್ತೆರೆದು ವಾಹನ ಸವಾರರಿಗೆ ಯಮ ಸ್ವರೂಪಿಯಾಗಿತ್ತು.

ಕಳೆದ ನಾಲ್ಕು ದಿನಗಳಲ್ಲಿ 12 ಕ್ಕೂ ಹೆಚ್ಚು ಅಪಘಾತಗಳು ಈ ಭಾಗದಲ್ಲಿ ಸಂಭವಿಸಿದ್ದು ದ್ವಿಚಕ್ರ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯ ಅಂಗಡಿ ಮಾಲಿಕರು ಮತ್ತು ಸಾರ್ವಜನಿಕರು ತಕ್ಷಣವೇ ಸ್ಪಂದಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ.

ಗ್ರಾಮ ಪಂಚಾಯತ್, ನಗರಸಭೆ ಆಡಳಿತದ ಗಮನಕ್ಕೆ ತಂದರೂ ಈ ಸಮಸ್ಯೆಗೆ ಮುಕ್ತಿ ನೀಡಿಲ್ಲ. ಮಳೆಯಿಂದಾಗಿ ಹೊಂಡದಲ್ಲಿ ನೀರು ನಿಂತು ವಾಹನ ಸವಾರರು ಹೊಂಡಕ್ಕೆ ಬಿದ್ದು ಗಾಯಗೊಂಡ ಘಟನೆಯೂ ವರದಿಯಾಗಿದೆ. ಈ ಪರಿಸರದಲ್ಲಿ ಸೂಕ್ತ ದಾರಿದೀಪದ ವ್ಯವಸ್ಥೆ ಕೂಡಾ ಇಲ್ಲದಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!