ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುವರ್ಷದ ಬಾಯ್‌ಫ್ರೆಂಡ್ ಜೊತೆ ನಟಿ ಕೀರ್ತಿ ಸುರೇಶ್ ಇತ್ತೀಚೆಗಷ್ಟೇ ಹಸೆಮಣೆ ಏರಿದ್ದಾರೆ. ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಕೀರ್ತಿ ಮದುವೆಯಾಗಿದ್ದು, ಇದೀಗ ಆಕ್ಟಿಂಗ್ ಸಂಬಂಧಿಸಿದಂತೆ ಶಾಕಿಂಗ್ ಸುದ್ದಿ ಹೊರಬಿದ್ದಿದೆ.
ಮಹಾನಟಿ ಕೀರ್ತಿ ಆಕ್ಟಿಂಗ್‌ಗೆ ಗುಡ್ ಬೈ ಹೇಳ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಎಷ್ಟೋ ನಟಿಯರು ಮದುವೆಯ ನಂತರ ಆಕ್ಟಿಂಗ್ ನಿಲ್ಲಿಸ್ತಾರೆ. ಇನ್ನು ಹಲವರು ನಟನೆಯಲ್ಲೇ ರಿಸ್ಟ್ರಿಕ್ಷನ್ ಮಾಡಿಕೊಳ್ತಾರೆ. ಅದೇ ಸಾಲಿಗೆ ನಟಿ ಕೀರ್ತಿ ಸುರೇಶ್ ಕೂಡ ಸೇರ್ತಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.
ಕೆಲವು ವರ್ಷಗಳ ಹಿಂದೆ, ಕೀರ್ತಿ ಸುರೇಶ್ ಮದುವೆಯ ನಂತರ ಸಿನಿಮಾ ಬಿಟ್ಟು, ಚಿತ್ರ ನಿರ್ಮಾಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ಅದು ನಿಜವಾಗುವಂತೆ ಕಾಣುತ್ತಿದೆ. ನಟ ಅಜಿತ್ ಪತ್ನಿ ಶಾಲಿನಿ ಕೂಡ ಸಿನಿಮಾದಲ್ಲಿ ಉತ್ತುಂಗದಲ್ಲಿದ್ದಾಗ ಮದುವೆಯಾಗಿ ಸಿನಿಮಾ ಬಿಟ್ಟರು. ಈಗ ಕೀರ್ತಿ ಕೂಡ ಅದೇ ಹಾದಿ ಹಿಡಿಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಸ್ವತಃ ಕೀರ್ತಿ ಉತ್ತರಿಸಬೇಕಷ್ಟೇ!