ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಜವಾನ್’ ಸಿನಿಮಾ ನಿರ್ದೇಶನ ಮಾಡಿದ ಕಾಲಿವುಡ್ ನಿರ್ದೇಶಕ ಅಟ್ಲಿ ಅವರ ಖ್ಯಾತಿ ಹೆಚ್ಚಾಗಿದೆ. ಅವರು ಈಗ ಬಾಲಿವುಡ್ನಲ್ಲಿ ಬ್ಯುಸಿ ಇದ್ದಾರೆ. ಅವರ ಮುಂದಿನ ಚಿತ್ರಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಈಗ ಅವರ ನಿರ್ದೇಶನದ ಆರನೇ ಸಿನಿಮಾ ಅನೌನ್ಸ್ ಆಗಿದೆ. ಇದಕ್ಕೆ ಸದ್ಯ ‘A6’ ಎನ್ನುವ ಟೈಟಲ್ ಇಡಲಾಗಿದೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಪ್ರಮುಖ ಪಾತ್ರವಹಿಸಲಿದ್ದಾರೆ.
‘ಎ6 ಚಿತ್ರಕ್ಕೆ ಸಾಕಷ್ಟು ಸಮಯ ಹಾಗೂ ಎನರ್ಜಿ ಬೇಕಿದೆ. ನಾವು ಸ್ಕ್ರಿಪ್ಟ್ನ ಪೂರ್ಣಗೊಳಿಸುವ ಹಂತದಲ್ಲಿ ಇದ್ದೇವೆ. ದೇವರ ಅನುಗೃಹದಿಂದ ಶೀಘ್ರವೇ ದೊಡ್ಡ ಅನೌನ್ಸ್ಮೆಂಟ್ ಆಗಲಿದೆ’ ಎಂದು ಅಟ್ಲಿ ಹೇಳಿದ್ದಾರೆ.
ನಾನು ಪಾತ್ರವರ್ಗದ ಮೂಲಕ ಎಲ್ಲರಿಗೂ ಸರ್ಪ್ರೈಸ್ ನೀಡಲಿದ್ದೇನೆ. ನೀವು ಏನನ್ನು ಯೋಚಿಸುತ್ತಿದ್ದೀರೋ ಅದು ನಿಜ.ಆದಾಗ್ಯೂ ನಿಮಗೆ ಸರ್ಪ್ರೈಸ್ ಇದೆ. ಇದು ಭಾರತವೇ ಹೆಮ್ಮೆ ಪಡೋ ಸಿನಿಮಾ ಆಗಲಿದೆ. ನಮಗೆ ಸಾಕಷ್ಟು ಆಶೀರ್ವಾದ ಹಾಗೂ ಪ್ರಾರ್ಥನೆ ಬೇಕು. ಸದ್ಯ ಪಾತ್ರಗಳ ಆಯ್ಕೆ ನಡೆಯುತ್ತಿದೆ. ಕೆಲವೇ ವಾರಗಳಲ್ಲಿ ಎಲ್ಲವೂ ಅಂತಿಮ ಆಗಲಿದೆ ಎಂದು ಹೇಳಿದ್ದಾರೆ.