ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಧರ್ಮೇಂದ್ರ ಬಾಲಿವುಡ್ಗೆ ಕಾಲಿಟ್ಟು 64 ವರ್ಷಗಳೇ ಕಳೆದಿವೆ. ಈಗಷ್ಟೇ ರಿಲೀಸ್ ಆಗಿರುವ ‘ತೇರಿ ಬಾತೋ ಮೇ ಏಸಾ ಉಲ್ಜಾ ಜಿಯಾ’ ಸಿನಿಮಾದಲ್ಲಿ ಶಾಹಿದ್ ಕಪೂರ್ ತಂದೆ ಪಾತ್ರದಲ್ಲಿ ಧರ್ಮೇಂದ್ರ ಕಾಣಿಸಿಕೊಂಡಿದ್ದಾರೆ.
64 ವರ್ಷಗಳ ಸಿನಿ ಜರ್ನಿಯಲ್ಲಿ ಸ್ಕ್ರೀನ್ ಮೇಲೆ ಸದಾ ಧರ್ಮೇಂದ್ರ ಎನ್ನುವ ಹೆಸರಷ್ಟೇ ಕಾಣಿಸಿದೆ. ಆದರೆ ಇದೇ ಮೊದಲ ಬಾರಿಗೆ ಧರ್ಮೇಂದ್ರ ಸಿಂಗ್ ಡಿಯೋಲ್ ಎಂದು ಬರೆಯಲಾಗಿದೆ.
89 ವರ್ಷದ ಧರ್ಮೇಂದ್ರ ಸಿನಿ ಇಂಡಸ್ಟ್ರಿಗೆ ಬಂದಾಗಿನಿಂದ ಧರ್ಮೇಂದ್ರ ಅಂತಷ್ಟೇ ಹೇಳಿಕೊಂಡಿದ್ದರು. ಎಲ್ಲಿಯೂ ಸಂಪೂರ್ಣ ಹೆಸರು ಡಿಸ್ಪ್ಲೇ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಸರ್ ನೇಮ್ ಸಹಿತ ಧರ್ಮೇಂದ್ರ ಹೆಸರು ಸ್ಕ್ರೀನ್ ಮೇಲೆ ಬಂದಿದೆ.