ಹಿರಿಯ ನಟ ನಂದಮೂರಿ ಬಾಲಕೃಷ್ಣ ಜತೆ ನಟಿಸೋ ಆಫರ್‌ ತಿರಸ್ಕರಿಸಿದ್ರಾ ನಟಿ ಕೃತಿ ಶೆಟ್ಟಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವೇಗವಾಗಿ ಟಾಲಿವುಡ್‌ ನಲ್ಲಿ ಯಶಸ್ಸು ಕಂಡ ನಟಿ ಕೃತಿ ಶೆಟ್ಟಿ. ಈಕೆಗೆ ಸಿನಿರಂಗದಲ್ಲಿ ಅತಿ ಹೆಚ್ಚು ಬೇಡಿಕೆ ಕೇಳಿ ಬರುತ್ತಿವೆ.
ಈ ನಡುವೆ ಕೃತಿ ಅವರ ಹೊಸ ಸಿನಿಮಾ ಬಗ್ಗೆ ಸುದ್ದಿ ಕೇಳಿಬಂದಿಲ್ಲ. ಬದಲಿಗೆ ಕೃತಿ ಒಬ್ಬ ಹಿರಿಯ ನಟನ ಚಿತ್ರವನ್ನು ತಿರಸ್ಕರಿಸಿದ್ದಾರೆ ಎಂದು ಈಗ ಸುದ್ದಿಯಲ್ಲಿದ್ದಾರೆ. ಕೃತಿ ಅವರ ಬಗ್ಗೆ ಈಗ ಹೆಚ್ಚು ಚರ್ಚೆಯಾಗುತ್ತಿದ್ದು, ಟಾಲಿವುಡ್‌ ನ ದಿಗ್ಗಜ ನಂದಮೂರಿ ಬಾಲಕೃಷ್ಣ ಅವರ ಚಿತ್ರಕ್ಕೆ ಕೃತಿ ಶಟ್ಟಿ ನೋ ಎಂದಿದ್ದಾರೆ.
ಬಾಲಕೃಷ್ಣ ಅವರ 107ನೇ ಸಿನಿಮಾ ಕೆಲಸಗಳು ನಡೆಯುತ್ತಿದ್ದು, ಈ ಚಿತ್ರಕ್ಕೆ ಗೋಪಿಚಂದ್‌ ಮಾಲಿನೇನಿ ನಿರ್ದೇಶನ ಮಾಡಲಿದ್ದಾರೆ. ಇದು ದೊಡ್ಡ ಬಜೆಟ್‌ ನ ಸಿನಿಮಾ ಆಗಿದೆ ಎನ್ನಲಾಗಿದೆ.
ಈ ಸಿನಿಮಾದಲ್ಲಿ ಬಾಲಕೃಷ್ಣ ಅವರ ಜತೆ ನಟಿಸಲು ಕೃತಿಗೆ ವಯಸ್ಸಿನ ಅಂತರ ಅಡ್ಡಿ ಬಂತು ಎನ್ನಲಾಗುತ್ತಿದೆ. ಬಾಲಕೃಷ್ಣ ಅವರಿಗೆ 61 ವಯಸ್ಸು, ಕೃತಿಗೆ 18 ವರ್ಷ ಮಾತ್ರವಾಗಿದ್ದು, ತುಂಬಾ ಸೀನಿಯರ್‌ ಆಗುತ್ತಾರೆ. ಜೋಡಿ ಸರಿಯಾಗುವುದಿಲ್ಲ ಎಂದು ಈ ಚಿತ್ರದ ಆಫರ್‌ ಬೇಡ ಎಂದಿದ್ದಾರಂತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!