ಐಪಿಎಲ್‌ ವಿಶ್ವದಲ್ಲೇ ಬೆಸ್ಟ್‌ ಟೂರ್ನಿಮೆಂಟ್ ಎಂದು ಗುಣಗಾನ ಮಾಡಿದ ಉಸ್ಮಾನ್‌ ಖವಾಜ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನೋರಂಜನ್‌ ಕಾ ಬಾಪ್‌ ಖ್ಯಾತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್)‌ ವಿಶ್ವದ ಅಗ್ರಮಾನ್ಯ ಕ್ರಿಕೆಟ್‌ ಲೀಗ್‌ ಆಗಿ ಹಲವಾರು ವರ್ಷಗಳಿಂದ ಗುರುತಿಸಿಕೊಂಡಿದೆ. ಐಪಿಎಲ್‌ ತನ್ನ ಪ್ರತಿಸ್ಪರ್ಧಿಗಳಾದ ಬಿಗ್‌ ಬ್ಯಾಷ್‌ ಲೀಗ್‌ ಮತ್ತು ಪಾಕಿಸ್ತಾನ್‌ ಸೂಪರ್‌ ಲೀಗ್‌ ಗಿಂತ ಅತ್ಯುತ್ತಮ ಟೂರ್ನಿ ಎಂದು ಹಲವಾರು ಕ್ರಿಕೆಟ್‌ ತಜ್ಞರು ಮತ್ತು ಅಭಿಮಾನಿಗಳು ಅಭಿಪ್ರಾಯ ಪಡುತ್ತಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್ಮನ್‌ ಉಸ್ಮಾನ್‌ ಖವಾಜ, ಐಪಿಎಲ್‌ ವಿಶ್ವದ ಬೆಸ್ಟ್‌ ಕ್ರಿಕೆಟ್‌ ಟೂರ್ನಿಮೆಂಟ್‌ ಎಂದು ಗುಣಗಾನ ಮಾಡಿದ್ದಾರೆ. ಭಾರತದ ವಿಶ್ವಶ್ರೇಷ್ಠ ಆಟಗಾರರು ಐಪಿಎಲ್‌ನಲ್ಲಿ ಮಾತ್ರವೇ ಭಾಗಿಯಾಗುತ್ತಾರೆ. ಈ ಕಾರಣದಿಂದ ಅಲ್ಲಿ ಹೆಚ್ಚಿನ ಪೈಪೋಟಿ, ಮನೋರಂಜನೆ ಇರುತ್ತದೆ. ಈ ವಿಚಾರವೇ ಐಪಿಎಲ್ ಅನ್ನು ಪಿಎಎಸ್‌ಎಲ್‌ ಗಿಂತ ವಿಭಿನ್ನವಾಗಿಸಿದೆ.‌ ಪಿಎಸ್‌ಎಲ್‌ ಟೂರ್ನಿ ಯಾವುದೇ ರೀತಿಯಲ್ಲಿ ಐಪಿಎಲ್‌ಗೆ ಸರಿಸಾಟಿ ಆಗಲ್ಲ ಎಂದು ಖವಾಜ ಹೇಳಿದ್ದಾರೆ. ಪಾಕ್‌ ಪ್ರವಾಸಕ್ಕೆ ತೆರಳಿರುವ ಆಸಿಸ್‌ ತಂಡದಲ್ಲಿ ಸ್ಥಾನ ಪಡೆದಿರುವ ಖವಾಜ, ಪಾಕಿಸ್ತಾನ ನೆಲದಲ್ಲಿಯೇ ಈ ಮಾತುಗಳನ್ನು ಹೇಳಿರುವುದು ವಿಶೇಷವಾಗಿದೆ!.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!