November 6, 2026
Friday, November 6, 2026
spot_img

ದೆಹಲಿ ಚಲೋ ರ‍್ಯಾಲಿಗೆ ಬಂದಿಲ್ಲ : 300ಕ್ಕೂ ಹೆಚ್ಚು ಯುವ ಕಾಂಗ್ರೆಸ್‌ ಕಾರ್ಯಕರ್ತರು ಅಮಾನತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂಡಿಯಾ ಬ್ಲಾಕ್‌ನ ಚಲೋ ದೆಹಲಿ ರ‍್ಯಾಲಿಗೆ ಬಾರದ 300ಕ್ಕೂ ಹೆಚ್ಚು ಯುವ ಪದಾಧಿಕಾರಿಗಳನ್ನು ಭಾರತೀಯ ಯುವ ಕಾಂಗ್ರೆಸ್‌ ಅಮಾನತುಗೊಳಿಸಿದೆ. ಪಕ್ಷದಲ್ಲಿ ಶಿಸ್ತು ಮುಖ್ಯ. ನಂತರದಿಂದ ಎಲ್ಲರೂ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿ ಎನ್ನುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ವಿಧಾನಸಭಾ ಮಟ್ಟದಿಂದ ಕೇಂದ್ರ ಮಟ್ಟದವರೆಗಿನ ಪದಾಧಿಕಾರಿಗಳು ರ‍್ಯಾಲಿಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಭಾಗವಹಿಸುವಂತೆ ಸೂಚಿಸಲಾಗಿತ್ತು. ‘ಐವೈಸಿ ಜೊತೆ’ ಆ್ಯಪ್ ಮೂಲಕ ತಮ್ಮ ಹಾಜರಾತಿ ದಾಖಲಿಸುವಂತೆಯೂ ನಿರ್ದೇಶಿಸಲಾಗಿತ್ತು. ರ‍್ಯಾಲಿಗೂ ಮುನ್ನ ಮಿಂಟೋ ರಸ್ತೆ ಕ್ರಾಸಿಂಗ್‌ನಲ್ಲಿ ಮೆರವಣಿಗೆಗೆ ಸೇರಲು ಸಭಾ ಸ್ಥಳ ನಿಗದಿಪಡಿಸಲಾಗಿತ್ತು.

ರ‍್ಯಾಲಿ ನಂತರ ಹಾಜರಾತಿ ಪರಿಶೀಲನೆ ಮಾಡಲಾಗಿದೆ. ಈ ವೇಳೆ 300ಕ್ಕೂ ಹೆಚ್ಚು ಮಂದಿ ಗೈರಾಗಿರುವುದು ಗಮನಕ್ಕೆ ಬಂದಿದೆ. ಇವರು ಯಾವುದೇ ಸಮಂಜಸ ಕಾರಣವನ್ನೂ ನೀಡದೇ ಗೈರಾಗಿದ್ದಾರೆ ಎಂದು ಹೇಳಿ ಅಮಾನತು ಮಾಡಲಾಗಿದೆ. ಅಮಾನತು ಆಗಿರುವ ಪದಾಧಿಕಾರಿಗಳು ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯಗಳ ಮೂಲಕ ಗುರುತಿಸಿಕೊಂಡರೆ ಆಗ ಮತ್ತೆ ಸಂಘಟನೆಗೆ ಸೇರಿಸಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

Must Read