July 14, 2026
Tuesday, July 14, 2026
spot_img

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ, ಅನಿವಾರ್ಯವೂ ಇಲ್ಲ ಎಂದ ಜಾರಕಿಹೊಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂಗ್ರೆಸ್‌ ಪಕ್ಷದ ಪ್ರಮುಖ ಹುದ್ದೆ ಖಾಲಿ ಇದ್ದು, ಈ ಸ್ಥಾನಕ್ಕೆ ಹೈಕಮಾಂಡ್‌ ಯಾರನ್ನು ಆರಿಸಲಿದೆ ಎನ್ನುವ ಕುತೂಹಲ ರಾಜಕೀಯದಲ್ಲಿ ಮನೆಮಾಡಿದೆ. ಈ ಮಧ್ಯೆ ಸತೀಶ್‌ ಜಾರಕಿಹೊಳಿ ತಾವು ಪಕ್ಷದ ಶಿಸ್ತಿನ ಸಿಪಾಯಿ ಎಂದು ಪ್ರೂವ್‌ ಮಾಡಿಕೊಳ್ಳೋದಕ್ಕೆ ನಿಂತಿದ್ದಾರೆ.

ಪಕ್ಷದ ಪ್ರಮುಖ ಹುದ್ದೆ ಖಾಲಿ ಇದೆ, ಈ ಎಲ್ಲ ಸ್ಥಾನಗಳನ್ನು ಭರ್ತಿ ಮಾಡುವ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಅವರು ಹೇಗೆ ಹೇಳ್ತಾರೋ ಹಾಗೆ ಮಾಡಬೇಕಾಗುತ್ತದೆ ಎಂದಿದ್ದಾರೆ. ನಾನು ಸ್ಥಾನಕ್ಕಾಗಿ ಲಾಬಿ ಮಾಡ್ತಾ ಇದ್ದೀನಿ ಎನ್ನುವ ಸುದ್ದಿಗಳು ಹರಿದಾಡ್ತಿವೆ. ಆದರೆ ನಾನು ಹೈಕಮಾಂಡ್‌ ಮುಂದೆ ಯಾವ ಬೇಡಿಕೆಯನ್ನೂ ಇಟ್ಟಿಲ್ಲ.

ನಾನು ಕೆಪಿಸಿಸಿ ಅಧ್ಯಕ್ಷರ ಸ್ಥಾನವನ್ನು ಅಲಂಕರಿಸೋಕೆ ಇಷ್ಟಪಡ್ತಿದ್ದೀನಿ ಎನ್ನುವ ಸುದ್ದಿ ಯಾವಾಗಿನಿಂದಲೂ ಇದೆ. ಆದರೆ ಇದೆಲ್ಲ ನಾವು ನಾವೇ ನಿರ್ಧಾರಕ್ಕೆ ಬರುವ ವಿಷಯ ಅಲ್ಲ. ನಾಯಕತ್ವದಲ್ಲಿ ಯಾವೆಲ್ಲ ಬದಲಾವಣೆಗಳು ಆಗುತ್ತಿವೆ ನೋಡಬೇಕು ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !