ಪಾಕ್ ಪರ ಘೋಷಣೆ | ರಾಜ್ಯಪಾಲರು, ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಸರ್ಕಾರ ವಜಾಗೊಳಿಸಲು ಆಗ್ರಹ

ವಿಧಾನಪರಿಷತ್ತು:

ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ನಂತರ ನಾಸೀರ್ ಹುಸೇನ್ ಅವರ ಬೆಂಬಲಿಗರು ದೇಶದ್ರೋಹಿ ಘೋಷಣೆ ಕೂಗಿದ್ದರೂ ಸರ್ಕಾರ  ಕ್ರಮ ಜರುಗಿಸಿಲ್ಲ ಹಾಗಾಗಿ ರಾಷ್ಟ್ರಪತಿಗಳು, ರಾಜ್ಯಪಾಲರು ಕೂಡಲೇ ಈ ಸರ್ಕಾರವನ್ನು ವಜಾ ಮಾಡಬೇಕು ಎಂದು ವಿರೋಧ ಪಕ್ಷದ ಸಚೇತಕ ಎಸ್.ರವಿ ಆಗ್ರಹಿಸಿದರು.

ಈ ವಿಚಾರವಾಗಿ ಮಾತನಡಿದ ಅವರು, ಪಾಕಿಸ್ತಾನಕ್ಕೆ ಜಿಂದಾಬಾದ್ ಘೋಷಣೆ ಕೂಗಿರುವುದರಿಂದ ದೇಶದ 120 ಕೋಟಿ ಜನರಿಗೆ ಅಪಮಾನ ಆಗಿದೆ. ಸಂವಿಧಾನವನ್ನು ಅವರು ಓದಲಿ, ನಾವು ಓದಿದ್ದೇವೆ. ನಾಸೀರ್ ಹುಸೇನ್ ಪಾಕಿಸ್ತಾನ ಏಂಜೆಂಟಾ..? ಅವರನ್ನು ರಾಜ್ಯಸಭಾ ಸದಸ್ಯರಾಗುವುದನ್ನು ತಡೆಯಬೇಕು. ಶಕ್ತಿ ಸೌಧದಲ್ಲಿ ಸರ್ಕಾರವೇ ಇರುವಾಗ ದೇಶ ದ್ರೋಹದ ಹೇಳಿಕೆ ಕೂಗಿದ್ದಾರೆ. ಇದು ಭಾರತಕ್ಕೆ, ಸಂವಿಧಾನಕ್ಕೆ, ಅಂಬೇಡ್ಕರ್ ಗೆ ಮಾಡಿರುವ ಅಪಮಾನ ಎಂದು ಹೇಳಿದರು.

ರಾಜ್ಯದಲ್ಲಿ ಮತ್ತೆ ಮತ್ತೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ನಿತೀಶ್ ಕೌರ್ ರನ್ನು ಕರೆಸಿ ಅವರಿಂದ ಸಂವಿಧಾನದ ಬಗ್ಗೆ ಭಾಷಣ ಮಾಡಿಸಿದ್ದಾರೆ, ಸಂವಿಧಾನ ಕಾರ್ಯಕ್ರಮ ಮುಗಿದು ಎರಡು ದಿನಗಳ ಬಳಿಕ ದೇಶ ದ್ರೋಹದ ಕೆಲಸ ಆಗಿದೆ. ರಾಜ್ಯಪಾಲರು, ರಾಷ್ಟ್ರ ಪತಿಗಳು ಮಧ್ಯ ಪ್ರವೇಶ ಮಾಡಿ ಸರ್ಕಾರವನ್ನ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಮಾಧ್ಯಮ ನಮ್ಮ ದೇಶದ ನಾಲ್ಕನೇ ಅಂಗ ಮಾಧ್ಯಮಕ್ಕೆ ನಾಸೀರ್ ಹುಸೇನ್ ಏಕ ವಚನ ಬಳಸಿದ್ದಾರೆ. ನಾಸೀರ್ ಹುಸೇನ್ ಗೆ ಪ್ರಮಾಣ ವಚನ ಮಾಡಲು ಬಿಡಬಾರದು ಎಂದು ಪಟ್ಟು ಹಿಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!