ಹೊಸದಿಗಂತ, ಹುಬ್ಬಳ್ಳಿ:
ಬಿಜೆಪಿಯಲ್ಲಿದ್ದು ಜಗದೀಶ ಶೆಟ್ಟರ್ ಕಳೆದ ಮೂವತ್ತು ವರ್ಷಗಳಿಂದ ಶ್ರೀರಾಮಚಂದ್ರಗೆ ಜೈ ಎಂದು ಹೇಳುತ್ತಿದ್ದರು. ಈಗ ಪಕ್ಷ ಬದಲಾಯಿಸಿದ್ದಾರೆ. ಪಕ್ಷ ಬದಲಾಗಿದೆ ಎಂಬ ಮಾತ್ರಕ್ಕೆ ಭಾವನೆಗಳು ಬಲಿಯಾಗಬಾರದು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ ಕ್ಷುಲ್ಲಕ ರಾಜಕೀಯ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಸಮಸ್ತ ದೇಶದ ಜನ ಇಂದು ರಾಮಮಂದಿರದ ಬಗ್ಗೆ ಉತ್ತಮ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಶೆಟ್ಟರ್ ಅವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸದ್ಯ ಜಗದೀಶ ಶೆಟ್ಟರ್ ಅವರಿಗೆ ಕಾಂಗ್ರೆಸ್ ನಲ್ಲಿ ಬೆಲೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಕಾಂಗ್ರೆಸ್ ನ ಹಲವು ನಾಯಕರು ಈ ಬಗ್ಗೆ ಅವರಿಗೆ ಬೆಲೆ ಇಲ್ಲಾ ಅನ್ನೊಂದನ್ನು ತಿಳಿಸಿದ್ದಾರೆ ಎಂದರು.
ನಾ ಘರ್ ಕಾ ನಾ ಘಾಟ್ ಕಾ ಎನ್ನುವ ಪರಿಸ್ಥಿತಿ ಶೆಟ್ಟರ್ ಗೆ ಬಂದಿದೆ. ಹೀಗಾಗಿ ಹತಾಶ ಭಾವನೆಯಿಂದ ಅವರು ಮಾತನಾಡುತ್ತಿದ್ದಾರೆ. ಅವರನ್ನ ಬಿಜೆಪಿಗೆ ವಾಪಸ್ ಕರೆತರುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದರು.
ಜಗದೀಶ ಶೆಟ್ಟರ ಕಾಂಗ್ರೆಸ್‌ಗೆ ಹೋಗಿದ್ದಾರೆ ಅಲ್ಲಿಯೇ ಆರಾಮವಾಗಿರಲಿ ಎಂದು ಹೇಳಿದರು.