AYODHYA | ಉದ್ಘಾಟನೆಗೆ ಸಜ್ಜಾಗಿರುವ ರಾಮಮಂದಿರದ ಹೊಸ ಫೋಟೋಗಳು ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ಈ ಉದ್ಘಾಟನೆಗೆ ಸಹಿತವಾಗಿ ರಾಮಮಂದಿರ ಟ್ರಸ್ಟ್‌ ರಾಮಮಂದಿರದ ಕಾಮಗಾರಿಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ರಾಮಮಂದಿರದ ಗರ್ಭಗುಡಿ, ಚಿನ್ನ ಲೇಪಿತ ಬಾಗಿಲುಗಳು ಹಾಗೂ ರಾಮಮಂದಿರ ಆವರಣದ ಹೊಸ ಫೋಟೊಗಳು ರಾಮಮಂದಿರ ಟ್ರಸ್ಟ್‌ ಹಂಚಿಕೊಂಡಿವೆ. ಉತ್ತರ ಪ್ರದೇಶ ಪೊಲೀಸರು ಅಯೋಧ್ಯೆಯಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ನಗರದಲ್ಲಿ 10,000 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ ಮತ್ತು ಸಮಾರಂಭದ ದಿನ ಡ್ರೋನ್‌ ಮೂಲಕ ಕಣ್ಗಾವಲು ಇಡಲಾಗುತ್ತದೆ. ಈ ಪ್ರದೇಶದಲ್ಲಿ ಯಾವುದೇ ಅನಧಿಕೃತ ಡ್ರೋನ್‌ ಹಾರಾಡುತ್ತಿಲ್ಲ ಎಂದು ಖಚಿತಪಡಿಸಲು ಆ್ಯಂಟಿ ಡ್ರೋನ್‌ ಸಿಸ್ಟಮ್‌ ಜಾರಿಗೊಳಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!