ಸಾಲು ಸಾಲು ಚಿತ್ರಗಳ ಆಫರ್‌ ನಡುವೆ ಸಂಭಾವನೆ ಹೆಚ್ಚಿಸಿಕೊಂಡ್ರಾ ನಟಿ ಶ್ರೀಲೀಲಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸ್ಯಾಂಡಲ್‌ವುಡ್‌ ಹಾಗೂ ಟಾಲಿವುಡ್‌ ಚಿತ್ರಗಳಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ನಟಿ ಶ್ರೀಲೀಲಾ ಈಗ ತಮ್ಮ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿದ್ದಾರಂತೆ.
ಕನ್ನಡದ ಕಿಸ್‌ ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿಕೊಟ್ಟ ಶ್ರೀಲೀಲಾಗೆ ಈಗ ಸಾಲು ಸಾಲು ಸಿನಿಮಾ ಆಫರ್‌ ಗಳು ಬರುತ್ತಿವೆ. ಇತ್ತೀಚೆಗೆ ತೆಲುಗಿನಲ್ಲಿ ನಟಿಸಿದ ಪೆಳ್ಳಿ ಸಂದಡಿ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ.
ಈಗ ಸಾಕಷ್ಟು ಚಿತ್ರ ನಿರ್ಮಾಣ ಸಂಸ್ಥೆಗಳು ಶ್ರೀಲೀಲಾ ಅವರನ್ನು ಆಯ್ಕೆ ಮಾಡಿಕೊಂಡಿವೆ. ಹಾಗಾಗಿ ಶ್ರೀಲೀಲಾ ತಮ್ಮ ಸಂಭಾವನೆ 75 ಲಕ್ಷ ದಿಂದ 1 ಕೋಟಿ ರೂ. ಗೆ ಏರಿಕೆ ಮಾಡಿಕೊಂಡಿದ್ದಾರಂತೆ.
ಸದ್ಯ ಕನ್ನಡದಲ್ಲಿ ಬೈಟು ಲವ್‌ ಚಿತ್ರದ ಶೂಟಿಂಗ್‌ ಹಾಗೂ ತೆಲುಗಿನಲ್ಲಿ ನವೀನ್‌ ಪೊಲಿಶೆಟ್ಟಿ ಹಾಗೂ ನಟ ವೈಷ್ಣವ್‌ ತೇಜ್‌ ಜತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗಳಿಗೂ ಶ್ರೀ ಲೀಲಾ ಒಂದು ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಹರಿದಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!