ಇತ್ತೀಚೆಗೆ ತುಂಬಾ ಸೋಂಬೇರಿ ಆಗಿದ್ದೀರಾ? ಸೋಂಬೇರಿತನ ಹೀಗೆ ದೂರ ಮಾಡಬಹುದು..

ಸೋಂಬೇರಿತನ ಒಮ್ಮೆ ಬಂದುಬಿಟ್ರೆ ಅದನ್ನು ಹೋಗಿಸೋದು ತುಂಬಾನೇ ಕಷ್ಟ. ಪ್ರತಿ ಹೆಜ್ಜೆಯಲ್ಲೂ, ಪ್ರತೀ ಕೆಲಸಕ್ಕೂ ಇಲ್ಲ ಎನ್ನುವ ಬುದ್ಧಿ ಬಂದುಬಿಡುತ್ತದೆ. ಕೆಲವು ವಿಷಯಗಳಲ್ಲಿ ಸೋಂಬೇರಿತನ ಇದ್ದರೆ ಪರವಾಗಿಲ್ಲ. ಆದರೆ ಅದೇ ಅಭ್ಯಾಸ ಆಗಿ ಹೋದ್ರೆ ಮತ್ತೆ ವಾಪಾಸೋಗೋದು ಕಷ್ಟ. ಸೋಂಬೇರಿ ಆಗ್ತಿದ್ದೇನೆ ಎಂದು ಅನಿಸಿದ ತಕ್ಷಣ ಈ ಕೆಲಸ ಮಾಡಿ..

ಅಸಾಧ್ಯವಾದ ಗೋಲ್‌ಗಳು ಬೇಡ, ಸಾಧ್ಯವಾಗುವ ಗೋಲ್‌ಗಳನ್ನೇ ಸೆಟ್ ಮಾಡಿಕೊಳ್ಳಿ.

ನೀವು ಪರ್ಫೆಕ್ಟ್ ಅಲ್ಲ, ನಿಮ್ಮ ಕೆಲಸ ಪರ್ಫೆಕ್ಟ್ ಆಗಬೇಕು ಎಂದು ಒಂದೇ ಸಲಕ್ಕೆ ನಿರೀಕ್ಷೆ ಬೇಡ.

ನೆಗೆಟಿವ್ ಮಾತುಗಳ ಬದಲು, ಪಾಸಿಟಿವ್ ಮಾತುಗಳನ್ನು ಆಡಿ.

ಬರೀ ಮಾತಲ್ಲೇ ಮನೆ ಕಟ್ಟಬೇಡಿ, ಕೆಲಸಕ್ಕೆ ಪ್ಲಾನ್ ಮಾಡಿ.

ನಿಮ್ಮ ಶಕ್ತಿ ಯಾವುದರಲ್ಲಿದೆ ಯೋಚಿಸಿ.

ಒಬ್ಬರಿಗೇ ಕಷ್ಟ ಎನಿಸಿದರೆ ಸಹಾಯ ಪಡೆಯಿರಿ.

ಸೋಂಬೇರಿತನ ಹೆಚ್ಚಿಸುವ ಅಭ್ಯಾಸ ದೂರ ಮಾಡಿ, ಉದಾಹರಣೆಗೆ ಟಿವಿ ನೋಡೋದು, ಕೂತಲ್ಲೇ ಕೂರೋದು.

ಮುಂದಿನ ಪರಿಣಾಮಗಳ ಬಗ್ಗೆ ಆಲೋಚಿಸಿ, ಸೋಂಬೇರಿತನದ ಪರಮಾವಧಿ ನಂತರ ಏನು ಯೋಚಿಸಿ.

ಅಂದಿನ ಕೆಲಸ ಅಂದೇ ಮಾಡಿ, ನಾಳೆ ಎನ್ನುವ ಕಾನ್ಸೆಪ್ಟ್ ಬಿಟ್ಟುಬಿಡಿ.

ಸೋಂಬೇರಿತನದಿಂದ ನೀವು ಇತರರಿಗೆ ಅನಾನುಕೂಲ ಮಾಡುತ್ತಿದ್ದೀರಿ. ನಿಮ್ಮಿಂದ ಬೇರೆಯವರಿಗೆ ತೊಂದರೆ ಎನ್ನುವುದು ಮನಸ್ಸಿನಲ್ಲಿ ಇರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!