ಮಾಸ್ಕೋದ ಟೆರರ್ ಅಟ್ಯಾಕ್ ಯುಎಸ್ ಸರ್ಕಾರಕ್ಕೆ ಮೊದಲೇ ಗೊತ್ತಿತ್ತಾ? ಗೊತ್ತಿದ್ದೂ ಗೊತ್ತಿದ್ದೂ ಸುಮ್ಮನಿತ್ತಾ??

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಸ್ಕೋದಲ್ಲಿ ನರಮೇಧವೊಂದು ನಡೆಯಲಿದೆ ಎಂಬುದು ಅಮೆರಿಕಗೆ ಮೊದಲೇ ಗೊತ್ತಿತ್ತೇ?
ಹೌದು ಎನ್ನುತ್ತಿದೆ ಖುದ್ದು ಅಮೆರಿಕ! ಉಗ್ರರ ದಾಳಿಯೊಂದು ನಡೆಯಲು ಸಿದ್ಧತೆ ನಡೆದಿದೆ ಎಂಬ ಬಗ್ಗೆ ಆರಂಭದಲ್ಲಿಯೇ ಗುಪ್ತಚರ ಮಾಹಿತಿಗಳ ಮೂಲಕ ಯುಎಸ್ ಸರ್ಕಾರಕ್ಕೆ ತಿಳಿದಿತ್ತು. ಅದರಂತೆ ರಷ್ಯಾದ ಅಧಿಕಾರಿಗಳಿಗೆ ನಾವು ಎಚ್ಚರಿಸಿದ್ದೆವು ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿ ವಕ್ತಾರ ಅಡ್ರಿಯೆನ್ ವ್ಯಾಟ್ಸನ್ ಹೇಳಿದ್ದಾರೆ.

ಇದೇ ವೇಳೆ ಅಮೆರಿಕ ಈ ದಾಳಿಯನ್ನು ಭಯಾನಕ ಎಂದು ಹೇಳಿದೆ. ಉಕ್ರೇನ್ ಮೇಲಿನ ರಷ್ಯಾ ದಾಳಿಗೂ ಇದಕ್ಕೂ ಯಾವುದೇ ಸಂಬಂಧ ಕಂಡುಬರುತ್ತಿಲ್ಲ ಎಂದೂ ಅದು ಹೇಳಿದೆ.
ಮಾಸ್ಕೋದ ಮೇಲಿನ ಉಗ್ರರ ದಾಳಿಯನ್ನು ಈಗಾಗಲೇ ಭಾರತ, ಐರೋಪ್ಯ ರಾಷ್ಟ್ರಗಳ ಒಕ್ಕೂಟ, ಫ್ರಾನ್ಸ್, ಸ್ಪೇನ್ ಮತ್ತು ಇಟಲಿ ಮತ್ತಿತರ ದೇಶಗಳು ತೀವ್ರವಾಗಿ ಖಂಡಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!