ಖರ್ಗೆ ಅವರಿಂದ ಇಂಥ ಮಾತುಗಳನ್ನು‌ ನಿರೀಕ್ಷಿಸಿರಲಿಲ್ಲ: ಬಿ.ಎಸ್. ಯಡಿಯೂರಪ್ಪ

ಹೊಸದಿಗಂತ ವರದಿ ಕಲಬುರಗಿ:

ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಇದ್ದಂತಹ ಮಲ್ಲಿಕಾರ್ಜುನ ಖಗೆ೯ ಅವರು ಗೌರವಾನ್ವಿತ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ಸಪ೯ಕ್ಕೆ ಹೋಲಿಕೆ ಮಾಡಿದ್ದು,ಅವರ ಸ್ಥಾನಕ್ಕೆ ಶೋಭೆ ತರುವಂತಹ ಸಂಗತಿ ಅಲ್ಲ.ಹೀಗಾಗಿ ಮೋದಿ ಮತ್ತು ದೇಶದ ಜನತೆಗೆ ಅವರು ಕ್ಷಮೆ ಕೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಗೆ೯ ವಾಗ್ದಾಳಿ ನಡೆಸಿದರು.

ಶುಕ್ರವಾರ ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿ ಹೇಳಿಕೆಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಮತಗಳ ಹಿನ್ನೆಡೆಯಾಗಲಿದ್ದು,ಮಲ್ಲಿಕಾರ್ಜುನ ಖರ್ಗೆ ಅವರಿಂದ ಈ ರೀತಿ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದರು.

ದೇಶದ ಜನತೆ ಖಗೆ೯ ಅವರ ಹೇಳಿಕೆಯನ್ನು ಖಂಡನೆ ಮಾಡತಿದ್ದು,ಒಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಉನ್ನತ ಹುದ್ದೆಯಲ್ಲಿರುವವರಿಗೆ ಈ ತರಹದ ಮಾತುಗಳು ಗೌರವ ತಂದು ಕೊಡಲು ಸಾಧ್ಯವಿಲ್ಲ ಎಂದ ಅವರು,ಇದರಿಂದ ಅವರ ಪಕ್ಷಕ್ಕೆ ಹೊಡೆತ ಬಿಳಲಿದೆ ಹೊರತು, ಯಾವುದೇ ಲಾಭವಂತು ಆಗುವುದಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!