ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರನ್ನು ಓಟರ್‌ಟೇಕ್ ಮಾಡುವ ಸಮಯದಲ್ಲಿ ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿರುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಸಂಬೇಪಲ್ಲಿ ಮಂಡಲದ ದೇವಪಟ್ಲಮಿಟ್ಟದಲ್ಲಿ ನಡೆದಿದೆ.
ಘಟನೆಯಲ್ಲಿ ಟ್ಯಾಂಕರ್ ಚಾಲಕ ಮತ್ತು ಕ್ಲೀನರ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ಯಾಂಕರ್ ಪೀಲೇರು ಕಡೆಯಿಂದ ರಾಯಚೂಟ್ ಕಡೆಗೆ ಹೋಗುತ್ತಿತ್ತು ಎಂದು ಗೊತ್ತಾಗಿದೆ.
ಟ್ಯಾಂಕರ್ ಸಂಪೂರ್ಣ ಮುಗುಚಿ ಬಿದ್ದಿದ್ದರಿಂದ ಟ್ಯಾಂಕರ್‌ನಿಂದ ಡೀಸೆಲ್ ಸೋರಿಕೆಯಾಗುತ್ತಿದೆ. ಇದೀಗ ತಮ್ಮ ಕೈ-ಕಾಲುಗಳಿಗೆ ಕೆಲಸ ಕೊಟ್ಟ ಸ್ಥಳೀಯರು ಕ್ಯಾನ್‌ಗಳನ್ನಿಡಿದು ಡೀಸೆಲ್ ಟ್ಯಾಂಕರ್ ಬಳಿಗೆ ಕಾಲ್ಕಿತ್ತಿರು.
ನಾಮುಂದು-ತಾಮುಂದು ಎಂದು ಕ್ಯಾನುಗಳಲ್ಲಿ ತಂದು ಡೀಸೆಲ್ ತುಂಬಿಸಿರುವ ವಿಡಿಯೋ ವೈರಲ್ ಆಗಿದೆ. ಟ್ಯಾಂಕರ್ ಪಲ್ಟಿಯಾಗಿರುವ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಗುಂಪನ್ನು ಚದುರಿಸಿದರು. ಪ್ರಕರಣ ದಾಖಲಾಗಿದ್ದು, ಅಪಘಾತದ ಹಿಂದಿನ ಕಾರಣಗಳನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ.
డీజిల్ ట్యాంకర్ బోల్తా.. క్యాన్లకు పనిచెప్పిన స్థానికులు..#DieselTanker #ViralVideos #AnnamayyaDistrict #AndhraPradesh #10TVNews pic.twitter.com/NZplqv8G3A
— 10Tv News (@10TvTeluguNews) October 26, 2023