September 28, 2026
Monday, September 28, 2026
spot_img

DIET FRIENDLY | ಡಯಟ್ ಮಾಡುವವರಿಗೆ ಬೆಸ್ಟ್ ಆಪ್ಷನ್ : ಸಂಜೆಯ ಚಹಾದ ಜೊತೆಗೆ ಸವಿಯಿರಿ ಈ ಟೇಸ್ಟಿ ಬೀಟ್ರೂಟ್ ಚಿಪ್ಸ್!

ಬೀಟ್ರೂಟ್ ಚಿಪ್ಸ್ ಆಲೂಗಡ್ಡೆ ಚಿಪ್ಸ್‌ಗಿಂತ ಉತ್ತಮ ಪೌಷ್ಟಿಕಾಂಶ ಹೊಂದಿದೆ. ಕಡಿಮೆ ಕ್ಯಾಲೊರಿ ಮತ್ತು ಅತಿ ಹೆಚ್ಚು ನಾರಿನಾಂಶ ಹೊಂದಿರುವ ಈ ಗರಿಗರಿಯಾದ ಸ್ನ್ಯಾಕ್ಸ್ ಅನ್ನು ಎಣ್ಣೆಯಲ್ಲಿ ಕರೆದು ಅಥವಾ ಓವನ್‌ನಲ್ಲಿ ಬೇಕ್ ಮಾಡಿ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:
ಬೀಟ್ರೂಟ್
ಉಪ್ಪು
ಕಾಳುಮೆಣಸಿನ ಪುಡಿ
ಚಾಟ್ ಮಸಾಲ
ಎಣ್ಣೆ

ಮಾಡುವ ವಿಧಾನ:

ಮೊದಲು ಬೀಟ್ರೂಟ್ ಸಿಪ್ಪೆ ತೆಗೆದು, ಸ್ಲೈಸರ್ ಬಳಸಿ ತೆಳುವಾಗಿ ಕತ್ತರಿಸಿಕೊಳ್ಳಬೇಕು. ನಂತರ ಕತ್ತರಿಸಿದ ಬೀಟ್ರೂಟ್ ತುಂಡುಗಳನ್ನು ಒಂದು ಒಣ ಬಟ್ಟೆ ಅಥವಾ ಟಿಶ್ಯೂ ಪೇಪರ್ ಮೇಲೆ ಹರಡಿ, ಅದರಲ್ಲಿರುವ ಹೆಚ್ಚುವರಿ ನೀರನ್ನು ಸಂಪೂರ್ಣವಾಗಿ ಒರೆಸಿಕೊಳ್ಳಬೇಕು. ಬಳಿಕ ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಉರಿ ಮಧ್ಯಮವಾಗಿ ಇಟ್ಟುಕೊಂಡು ಬೀಟ್ರೂಟ್ ಸ್ಲೈಸ್‌ಗಳನ್ನು ಹಾಕಿ ಗರಿಗರಿಯಾಗುವವರೆಗೆ ಕರಿದು ಎಣ್ಣೆಯಿಂದ ತೆಗೆದ ತಕ್ಷಣ ಅದಕ್ಕೆ ಉಪ್ಪು, ಕಾಳುಮೆಣಸಿನ ಪುಡಿ ಮತ್ತು ಚಾಟ್ ಮಸಾಲ ಉದುರಿಸಿ ಚೆನ್ನಾಗಿ ಕೈಯಾಡಿಸಿದರೆ ಬೀಟ್ರೂಟ್ ಚಿಪ್ಸ್ ರೆಡಿ.

Must Read