ದಿನಭವಿಷ್ಯ| ಬಗೆಹರಿಯದ ಸಮಸ್ಯೆಯೊಂದು ಪರಿಹಾರ ಕಾಣಲಿದೆ

ಮೇಷ
ವೃತ್ತಿಗೆ ಸಂಬಂಧಿಸಿ ನಿಮಗೆ ಅತ್ಯಂತ ಪೂರಕ ಬೆಳವಣಿಗೆ. ನೀವು ಎದುರಿಸುವ ಕೆಲವು ಬದಲಾವಣೆಗಳು ನಿಮ್ಮ ಭವಿಷ್ಯಕ್ಕೆ ನೆರವಾಗಲಿವೆ. ಕೌಟುಂಬಿಕ ಶಾಂತಿ.

ವೃಷಭ
ವೃತ್ತಿಯಲ್ಲಿ ಫಲಪ್ರದ ಬೆಳವಣಿಗೆ. ನಿಮ್ಮ ಐಡಿಯಾಗಳಿಗೆ ಎಲ್ಲರಿಂದ ಮಾನ್ಯತೆ. ಕೌಟುಂಬಿಕ ಸೌಹಾರ್ದತೆ. ಹಣಕಾಸು ಸ್ಥಿತಿ ಉತ್ತಮ.

ಮಿಥುನ
ಮನೆಯಲ್ಲಿನ ಉಲ್ಲಾಸದ ವಾತಾವರಣ ನಿಮ್ಮ ವೃತ್ತಿಯಲ್ಲಿಯೂ ಉತ್ಸಾಹ ತುಂಬುವುದು. ಹಣಕ್ಕೆ ಸಂಬಂಧಿಸಿ ನಿಮಗೆ ಪೂರಕ ಬೆಳವಣಿಗೆ.

ಕಟಕ
ನಿಮ್ಮ ಕೆಲಸದಲ್ಲಿ ಉತ್ಸಾಹ ದಿಂದ ಪಾಲ್ಗೊಳ್ಳುವಿರಿ. ಇದು ಇತರರಿಗೂ ಪ್ರೇರಣೆ ನೀಡಲಿದೆ. ಬಗೆಹರಿಯದ ಉಳಿದಿದ್ದ ಸಮಸ್ಯೆಯೊಂದು ಇಂದು ಪರಿಹಾರ.

ಸಿಂಹ
ಕುಟುಂಬ ಸದಸ್ಯರು ಏನಾದರೂ ಸಲಹೆ ನೀಡಿದರೆ ಅಸಹನೆ ತಾಳಬೇಡಿ. ಅದನ್ನು ಸಹನೆಯಿಂದ ಆಲಿಸಿ. ನಿಮ್ಮ ಹಿತವೇ ಅವರ ಉದ್ದೇಶ ಎಂದರಿಯಿರಿ.

ಕನ್ಯಾ
ಬಾಕಿ ಉಳಿದ ಯೋಜನೆ ಮೊದಲು ಮುಗಿಸಿಕೊಳ್ಳಿ. ಬಳಿಕ ಹೊಸ ಯೋಜನೆಗೆ ಕೈಹಚ್ಚಿ. ಹಳೆಯ ಹೂಡಿಕೆಯ ಲಾಭ ಇಂದು ದೊರಕುವುದು.

ತುಲಾ
ನಿಮ್ಮ ಕೆಲಸದಲ್ಲಿ ತೋರಿಬರುವ ಕೆಲವು ಅಡ್ಡಿಗಳು ನಿಮಗೆ ಆಶ್ಚರ್ಯ ತರಲಿವೆ. ಆದರೆ ಬಳಿಕ ಎಲ್ಲವೂ ಸುಗಮವಾಗುವವು. ಆರ್ಥಿಕ ಒತ್ತಡ.

ವೃಶ್ಚಿಕ
ಆತ್ಮೀಯ ಬಂಧುಗಳ ಜತೆ ಹೆಚ್ಚು ಭಾವುಕರಾಗಿ ವರ್ತಿಸುವಿರಿ. ಆರೋಗ್ಯದ ಕಡೆ ಗಮನ ಕೊಡಿ. ಸಣ್ಣಪುಟ್ಟ ಅಸೌಖ್ಯ ಕಾಡಬಹುದು. ಆರ್ಥಿಕ ಕೊರತೆ ಕಾಡುವುದು.

ಧನು
ಕೆಲಸದಲ್ಲಿ ನಿಮ್ಮಿಂದ ತಪ್ಪು ಘಟಿಸಬಹುದು. ನಿಮ್ಮ ಕಾರ್ಯವನ್ನು  ಪರಿಶೀಲಿಸಿಕೊಳ್ಳಿ. ಕೌಟುಂಬಿಕ ವಿಷಯವೊಂದು  ಇಬ್ಬಂದಿಗೆ ತಳ್ಳಬಹುದು.

ಮಕರ
ಆರ್ಥಿಕವಾಗಿ ನಿಮಗಿಂದು ಪೂರಕ ದಿನ. ಖಾಸಗಿ ಮತ್ತು ವೃತ್ತಿ ಬದುಕನ್ನು ಆನಂದಿಸಬೇಕಾದರೆ ನಿಮ್ಮ ಜೀವನಶೈಲಿ ಬದಲಿಸಬೇಕು.

ಕುಂಭ
ದಿನವಿಡೀ ಒತ್ತಡದ ಕಾರ್ಯ. ಕೆಲವರ ಬೇಡಿಕೆ ಈಡೇರಿಸಲು ಕಷ್ಟಪಡುವಿರಿ. ಕುಟುಂಬ ಸದಸ್ಯರ ಜತೆ ಹೊಂದಾಣಿಕೆಯಿಂದ ವರ್ತಿಸಿರಿ.

ಮೀನ
ಕುಟುಂಬ ಸದಸ್ಯರ ಜತೆ ಸಂವೇದನೆಯಿಂದ ವರ್ತಿಸಿರಿ.  ಕೆಲಸದ ಹೊರೆಯನ್ನು ಸಹೋದ್ಯೋಗಿಗಳ ಜತೆ ಹಂಚಿಕೊಳ್ಳಿ. ಆರ್ಥಿಕ ಒತ್ತಡ ನಿವಾರಣೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!