ದಿನಭವಿಷ್ಯ| ಅಂದಿನ ತಪ್ಪನ್ನು ಈಗ ಸರಿಪಡಿಸಲು ಯತ್ನಿಸಿ ಎಲ್ಲವೂ ಒಳ್ಳೆಯದಾಗುವುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಜನರ ನಡುವೆ ಬೆರೆತು ಬಾಳಲು ಕಲಿಯಿರಿ. ಎಲ್ಲರಿಂದ ದೂರವಾಗಿ ನಿಲ್ಲಬೇಡಿ. ಕೌಟುಂಬಿಕ ಸಮಸ್ಯೆ ಶಾಂತಿಯಿಂದ ಬಗೆಹರಿಸಿ. ಸಂಘರ್ಷಕ್ಕೆ ಹೋಗದಿರಿ.

ವೃಷಭ
ಕೌಟುಂಬಿಕ ಒತ್ತಡವು ಅನಪೇಕ್ಷಿತ ಸನ್ನಿವೇಶ ಸೃಷ್ಟಿಸಬಹುದು. ಸಂಯಮದಿಂದ ವರ್ತಿಸುವುದು ಅಗತ್ಯ. ಪರಿಸ್ಥಿತಿ ಬಿಗಡಾಯಿಸಬೇಡಿ.

ಮಿಥುನ
ನಿಮ್ಮ ಅತಿಯಾದ ಭಾವುಕತೆಯು ಸಂಬಂಧದ ಮೇಲೆ ಪರಿಣಾಮ ಬೀರೀತು. ಎಲ್ಲವನ್ನೂ ಭಾವನಾತ್ಮಕತೆಯಿಂದ ಅಳೆಯಬೇಡಿ.

ಕಟಕ
ದಿನವು ನಿಮಗೆ ಪೂರಕವಾಗಿ ಆರಂಭ ವಾಗದಿದ್ದರೂ  ಬಳಿಕ ಎಲ್ಲವೂ ಸುಸೂತ್ರವಾಗಲಿದೆ. ನೀವು ಬಯಸಿದ ಕಾರ್ಯ ನೆರವೇರಲಿದೆ.

ಸಿಂಹ
ಎಲ್ಲರೊಂದಿಗೆ ಹೊಂದಾಣಿಕೆ ಸಾಧಿಸಿ. ಸಂಘರ್ಷದಿಂದ ಕೆಲಸ ಆಗಲಾರದು. ಕೆಲವರ ನಡೆನುಡಿ ನಿಮ್ಮ ಮನಸ್ಸಿಗೆ ಒಪ್ಪಿಗೆ ಆಗದಿರಬಹುದು.

ಕನ್ಯಾ
ಕೆಲವರ ವರ್ತನೆ ನಿಮ್ಮ ಮನಶ್ಯಾಂತಿ ಕಲಕಬಹುದು. ನಿಮ್ಮ ವ್ಯವಹಾರದಲ್ಲಿ ಅವರು ಮೂಗು ತೂರಿಸುತ್ತಾರೆ. ಆಪ್ತರಿಂದ ನಿಮಗೆ ಸಾಂತ್ವನ ದೊರಕೀತು.

ತುಲಾ
ಹಳೆಯ ಕಾರ್ಯಗಳು ಈಗ ತಮ್ಮ ಪರಿಣಾಮ ಬೀರಬಹುದು. ಅಂದಿನ ತಪ್ಪನ್ನು ಈಗ ಸರಿಪಡಿಸಲು ಯತ್ನಿಸಿ. ಇತರರ ಸಹಕಾರ ನಿಮಗೆ ಸಿಗುವುದು.

ವೃಶ್ಚಿಕ
ಖಾಸಗಿ ಹಿತಾಸಕ್ತಿಗೆ  ಗಮನ ಹರಿಸಲು ಸಾಧ್ಯವಾಗದ ಸ್ಥಿತಿ. ಇತರರ ಕಾರ್ಯ ಮಾಡುವುದರಲ್ಲೆ ನಿಮ್ಮ ಸಮಯ ವಿನಿಯೋಗ. ಸಹನೆ ಕಳಕೊಳ್ಳದಿರಿ.

ಧನು
ನಿಮ್ಮ ಕುಟುಂಬದ ನೆಮ್ಮದಿ ಹಾಳು ಮಾಡುವ ಆಲೋಚನೆ ಯಿಂದ ದೂರವಿರಿ. ಕೆಲವರ ಚಾಡಿಮಾತನ್ನು ನಂಬಬೇಡಿ. ಅವರನ್ನು ದೂರವಿಡಿ.

ಮಕರ
ಅತಿಯಾದ ಕೆಲಸದ ಒತ್ತಡ ಕಾಡುವುದು. ಸುಗಮ ಕಾರ್ಯವೂ ಕಷ್ಟಕರವಾಗಿ ಪರಿಣಮಿಸುವುದು. ಅದಕ್ಕೆ ನಿಮ್ಮ ಉದ್ವಿಗ್ನ ಮನಸ್ಥಿತಿಯೂ ಕಾರಣ.

ಕುಂಭ
ದಿನವನ್ನು ಆರಾಮವಾಗಿ ಕಳೆಯಬೇಕೆಂಬ ನಿಮ್ಮ ಯೋಜನೆ ಫಲಿಸದು. ಅನಿರೀಕ್ಷಿತ ಬೆಳವಣಿಗೆ ಸಂಭವಿಸುವುದು. ದಿನವಿಡೀ ಕಾರ್ಯದಲ್ಲಿ ಮಗ್ನರಾಗುವಿರಿ.

ಮೀನ
ಆಪ್ತರ ಕುರಿತಾದ ಚಿಂತೆಯು ಮನಸ್ಸನ್ನು ಕಾಡುವುದು. ಎಲ್ಲವೂ ಇದ್ದೂ ನೆಮ್ಮದಿ ಇಲ್ಲದಾಗುವ ಸ್ಥಿತಿಯನ್ನು ನೀವಿಂದು ಅನುಭವಿಸುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!