Wednesday, November 30, 2022

Latest Posts

ದೆಹಲಿ ಮಾಲಿನ್ಯ: ಮತ್ತಷ್ಟು ಕಳಪೆಯಾದ ಗಾಳಿಯ ಗುಣಮಟ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಷ್ಟ್ರ ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಡುತ್ತಿದೆ. ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 339 ರಷ್ಟಿರುವ ಕಾರಣ ಭಾನುವಾರ ಬೆಳಿಗ್ಗೆ ಇದು ಆತಂಕಕಾರಿ ಮಟ್ಟವನ್ನು ಮುಟ್ಟುತ್ತಿದೆ ಎಂದು SAFAR (ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಅಂಡ್ ವೆದರ್ ಫೋರ್ಕಾಸ್ಟಿಂಗ್ ಮತ್ತು ರಿಸರ್ಚ್) ಮಾಹಿತಿ ನೀಡಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದ ಭಾಗವಾಗಿರುವ ನೋಯ್ಡಾ ‘ಅತ್ಯಂತ ಕಳಪೆ’ ವಿಭಾಗದಲ್ಲಿ 349 ರ ಎಕ್ಯೂಐ ರಷ್ಟು ದಾಖಲಾಗಿದೆ. ಗುರುಗ್ರಾಮ್‌ನ ಎಕ್ಯೂಐ 304 ರಷ್ಟಿತ್ತು.

0 ರಿಂದ 100 ರವರೆಗಿನ ವಾಯು ಗುಣಮಟ್ಟ ಸೂಚ್ಯಂಕವನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ, ಆದರೆ 100 ರಿಂದ 200 ರವರೆಗೆ ಮಧ್ಯಮ, 200 ರಿಂದ 300 ರವರೆಗೆ ಅದು ಕಳಪೆಯಾಗಿರುತ್ತದೆ ಮತ್ತು 300 ರಿಂದ 400 ರವರೆಗೆ ಇದು ಅತ್ಯಂತ ಕಳಪೆ ಮತ್ತು 400 ರಿಂದ 500 ಅಥವಾ ಅದಕ್ಕಿಂತ ಮೇಲಿರುವುದ್ನು ʻತೀವ್ರʼ ಎಂದು ಹೇಳಲಾಗುತ್ತದೆ.

ಮುನ್ಸೂಚನೆಯ ಪ್ರಕಾರ, ಮುಂದಿನ ದಿನಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ಸುಧಾರಿಸುವ ಸಾಧ್ಯತೆಯಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!