ಮುಂಬೈನಲ್ಲಿ ಸಂಚರಿಸಲಿವೆ ʼಡಿಜಿಟಲ್‌ʼ ಬಸ್ಸುಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಾಣಿಜ್ಯನಗರಿ ಮುಂಬೈ ಹೊಸ ಸಂಪರ್ಕ ಕ್ರಾಂತಿಗೆ ಸಾಕ್ಷಿಯಾಗಿದೆ. ಸಂಪೂರ್ಣವಾಗಿ ಡಿಜಿಟಲ್‌ ಬಸ್‌ ಗಳನ್ನು ಪರಿಚಯಿಸುವ ಮೂಲಕ ಬಸ್‌ಗಳನ್ನು ಕ್ಯಾಶ್‌ ಲೆಸ್‌ ಆಗಿಸಲಾಗಿದೆ. ಜನ ಸಾಮಾನ್ಯರ ನೆಚ್ಚಿನ ಸಾರಿಗೆಯಾದ ಬಸ್ಸುಗಳೂ ಕೂಡ ಇನ್ನು ಮುಂದೆ ಸ್ಮಾರ್ಟ್‌ ಆಗಲಿವೆ. ಬಸ್‌ ಸೌಲಭ್ಯವೂ ಕೂಡ ಮೆಟ್ರೋ ಮಾದರಿಯಲ್ಲಿ ಮೇಲ್ದರ್ಜೆಗೇರಲಿದೆ.

ದೇಶದಲ್ಲೇ ಮೊದಲಬಾರಿಗೆ ಸಂಪೂರ್ಣವಾಗಿ ಡಿಜಿಟಲ್‌ ಆಗಿರುವ ಈ ಬಸ್‌ಗಳಲ್ಲಿ ʼಟ್ಯಾಪ್‌ ಇನ್‌ʼ ಮತ್ತು ʼಟ್ಯಾಪ್‌ ಔಟ್ʼ ಸೌಲಭ್ಯ ಒದಗಿಸಲಾಗಿದೆ. ಪ್ರಯಾಣಿಕರು ಸ್ಮಾರ್ಟ್‌ ಕಾರ್ಡ್‌ ಒಂದನ್ನು ಬಳಸಿ ಸುಲಭವಾಗಿ ತಮ್ಮ ಟಿಕೆಟ್‌ ಮೊತ್ತವನ್ನು ಪಾವತಿಸಬಹುದಾಗಿದೆ.

ಹತ್ತುವಾಗ ಬಾಗಿಲಬಳಿಯಿರುವ ಸಾಧನವೊಂದಕ್ಕೆ ಟ್ಯಾಪ್‌ ಮಾಡಿ ಒಳಗೆ ಪ್ರವೇಶಿಸಬೇಕು. ಮತ್ತು ಇಳಿಯುವಾಗ ಮತ್ತೊಮ್ಮೆ ಟ್ಯಾಪ್‌ ಮಾಡಿದಾಗ ಪ್ರಯಾಣಿಕರು ಪ್ರಯಾಣಿಸಿದ ದೂರದ ಆಧಾರದ ಮೇಲೆ ಟಿಕೆಟ್‌ ದರ ತಾನಾಗೇ ಕಡಿತಗೊಳ್ಳುತ್ತದೆ. ಸ್ಮಾರ್ಟ ಕಾರ್ಡ್‌ ಗಳ ಬದಲಾಗಿ ʼಚಲೋʼ ಎಂಬ ಹೆಸರಿನ ಮೊಬೈಲ್‌ ಅಪ್ಲಿಕೇಷನ್‌ ಬಳಸಿಯೂ ಪ್ರಯಾಣ ಮಾಡಬಹುದಾಗಿದ್ದು ಹತ್ತುವಾಗ ಟ್ಯಾಪ್‌ ಬದಲಾಗಿ ಸ್ಕ್ಯಾನ್‌ ಮಾಡಿದರಾಯಿತು.

ಹೊಸ ತಲೆ ಮಾರಿನ ಈ ಆವಿಷ್ಕಾರವು ಜನಸಾಮಾನ್ಯರಿಗೆ ಪ್ರಯಾಣದ ಪ್ರಯಾಸವನ್ನು ಸುಲಭವಾಗಿಸಿದೆ. ಬಸ್‌ ಹತ್ತಿದಕೂಡಲೆ ಚಿಲ್ಲರೆ ಕೇಳುವ ಕಂಡಕ್ಟರ್‌ ಗಳ ಕಿರಿಕಿರಿಯಿಲ್ಲ, ಚಿಲ್ಲರೆ ಇಟ್ಟುಕೊಂಡೇ ಬಸ್‌ ಹತ್ತಬೇಕೆನ್ನುವ ತಲೆನೋವಿಲ್ಲ. ಜೊತೆಗೆ ಟಿಕೆಟ್‌ ಮಾಡಿಸದೆಯೇ ಪ್ರಯಾಣಿಸುವ ಕಳ್ಳರ ಕಾಟವೂ ತಪ್ಪುತ್ತದೆ. ಪ್ರಸ್ತುತ ಈ ಡಿಜಿಟಲ್‌ ಬಸ್ಸುಗಳನ್ನು ಪ್ರಯೋಗಾತ್ಮಕವಾಗಿ ರಸ್ತೆಗೆ ಇಳಿಸಿದ್ದು ಪ್ರಯೋಗವು ಯಶಸ್ವಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ 20 ಡಿಜಿಟಲ್‌ ಬಸ್‌ಗಳು ಕಾರ್ಯ ನಿರ್ವಹಿಸಲಿದ್ದು ಮುಂದಿನ ದಿನಗಳಲ್ಲಿ ಇವುಗಳ ಸೇವೆ ವಿಸ್ತರಿಸಿಕೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!