ಕೊಬ್ಬಿನಾಂಶ ಆಹಾರ ಪದಾರ್ಥಗಳ ಆಯ್ಕೆಯಲ್ಲಿ ಎಚ್ಚರವಿರಲಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಹದಲ್ಲಿ ʻಕೊಬ್ಬುʼ ಪ್ರಮುಖ ಪಾತ್ರವಹಿಸುತ್ತವೆ. ಶಕ್ತಿ ಉತ್ಪಾದನೆ, ದೇಹದ ಬೆಳವಣಿಗೆ ಮತ್ತು ರಚನೆಗೆ ದೊಡ್ಡ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು ಮತ್ತು ಕೊಬ್ಬು ಬೇಕಾಗುತ್ತವೆ. ದೇಹದಲ್ಲಿ ಕೊಬ್ಬಿನ ಕೋಶಗಳ ಹೆಚ್ಚು/ಕಡಿಮೆ ಎರಡೂ ಅಪಾಯಕಾರಿ ರೋಗಗಳಿಗೆ ಕಾರಣವಾಗಬಹುದು. ಕೊಬ್ಬಿನಾಮ್ಲಗಳು ಮತ್ತು ಗ್ಲಿಸರಾಲ್ನೊಂದಿಗೆ ಕೊಬ್ಬು ರೂಪುಗೊಳ್ಳುತ್ತವೆ.

ಸಸ್ಯ ಮತ್ತು ಪ್ರಾಣಿಗಳ ಆಹಾರದಿಂದ ನಾವು ಕೊಬ್ಬನ್ನು ಪಡೆಯುತ್ತೇವೆ. ಅನೇಕ ಸಸ್ಯಗಳಿಂದ ಕೊಬ್ಬು ಎಣ್ಣೆಯ ರೂಪದಲ್ಲಿ ಸಿಗುತ್ತವೆ. ಕಡಲೆಕಾಯಿ, ಸೂರ್ಯಕಾಂತಿ, ತೆಂಗಿನಕಾಯಿ ಮತ್ತು ತಾಳೆ ಮುಂತಾದ ಸಸ್ಯ ಜಾತಿಗಳಿಂದ ಪಡೆದ ತೈಲಗಳಿಂದ ಕೊಬ್ಬನ್ನು ಪಡೆಯಲಾಗುತ್ತದೆ. ಪ್ರಾಣಿಗಳ ಕೊಬ್ಬಿನ ವಿಷಯಕ್ಕೆ ಬಂದರೆ, ತುಪ್ಪ, ಬೆಣ್ಣೆ, ಚೀಸ್ ಮತ್ತು ಮೊಟ್ಟೆ ಹಾಗೂ ಮಾಂಸದಿಂದ ಬರುತ್ತವೆ.

ಸಸ್ಯದಿಂದ ಸಿಗುವ ಎಣ್ಣೆಯಲ್ಲಿ ಅಪರ್ಯಾಪ್ತ ಕೊಬ್ಬಿನಾಮ್ಲ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಪ್ರಾಣಿಗಳಿಂದ ಸ್ಯಾಚುರೇಟೆಡ್ ಕೊಬ್ಬಿನಾಮ್ಲ ಸಿಗುತ್ತದೆ. ಸ್ಯಾಚುರೇಟೆಡ್ ಕೊಬ್ಬಿನಾಂಶವಿರುವ ಆಹಾರ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಹೃದಯದ ಅಪಧಮನಿಗೆ ಪ್ರವೇಶಿಸಿ ರಕ್ತ ಪರಿಚಲನೆಗೆ ಅಡ್ಡಿಯಾಗುತ್ತವೆ. ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!