ಜೈಲಿಗೂ ನುಗ್ಗಿದ ಡಿಜಿಟಲ್: ಕೈದಿಗಳಿಗೆ ಕರೆ ಮಾಡಲು ಇನ್ನು ಸ್ಮಾರ್ಟ್ ಕಾರ್ಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಜೈಲುಗಳಿಗೂ ‘ಡಿಜಿಟಲ್ ವ್ಯವಸ್ಥೆ ಕಾಲಿಟ್ಟಿದೆ! ತಮ್ಮ ಕುಟುಂಬ ಸದಸ್ಯರು, ವಕೀಲರ ಜೊತೆ ಮಾತನಾಡಲು ಮಹಾರಾಷ್ಟ್ರದ ಛತ್ರಪತಿ ಸಾಂಭಾಜಿನಗರದ ಹರ್ಸೂಲ್ ಕೇಂದ್ರ ಕಾರಾಗೃಹದಲ್ಲಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ಬಂದಿದ್ದು, ಆರಂಭದಲ್ಲಿ 650 ಕೈದಿಗಳು ಈ ವ್ಯವಸ್ಥೆಯ ಫಲಾನುಭವಿಗಳಾಗಿದ್ದಾರೆ.

ಈ ಸ್ಮಾರ್ಟ್ ಕಾರ್ಡ್ ಮೂಲಕ ವಾರಕ್ಕೆ ಮೂರು ಬಾರಿ ಉಚಿತ ಕರೆ ಮಾಡಲು ಅವಕಾಶವಿದೆ. ಒಮ್ಮೆ ಮಾಡುವ ಕರೆಯಲ್ಲಿ ಆರು ನಿಮಿಷ ಮಾತನಾಡಲು ಸಾಧ್ಯ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದು ಜೈಲಿನ ಅಧಿಕಾರಿಗಳ ಜೊತೆ ಹಂಚಿಕೊಳ್ಳಲಾದ ಸಂಖ್ಯೆಗಳಿಗೆ ಮಾತ್ರ ಕರೆ ಮಾಡಲು ಅವಕಾಶ ಕಲ್ಪಸಲಿದೆಯೇ ಎಂಬುದನ್ನು ಮಾತ್ರ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!