ನಟಿ ಶಿಲ್ಪಾ ಶೆಟ್ಟಿಗೆ ಶಾಕ್‌ ಕೊಟ್ಟ ಜಾರಿ ನಿರ್ದೇಶನಾಲಯ, ಎಲ್ಲಾ ಆಸ್ತಿ ಸೀಝ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ದಂಪತಿಗೆ ಇಡಿ ಬಿಗ್‌ ಶಾಕ್‌ ನೀಡಿದ್ದು, ಬರೋಬ್ಬರಿ 97ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

ಜಾರಿ ನಿರ್ದೇಶನಾಲಯ ಜಪ್ತಿ ಮಾಡಿರುವ ಒಟ್ಟಾರೆ 97 ಕೋಟಿ ಆಸ್ತಿಯಲ್ಲಿ ಶಿಲ್ಪಾ ಶೆಟ್ಟಿಗೆ ಸೇರಿರುವ ಮುಂಬೈನ ಜುಹುವಿನಲ್ಲಿರುವ ಅಪಾರ್ಟ್‌ಮೆಂಟ್  ಕೂಡ ಸೇರಿದೆ ಎನ್ನಲಾಗಿದೆ.

ಮುಂಬೈನ ಜಾರಿ ನಿರ್ದೇಶನಾಲಯವೂ ಉದ್ಯಮಿ ಹಾಗೂ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಸೇರಿದ 97.97 ಕೋಟಿ ಮೊತ್ತದ ಸ್ಥಿರ ಹಾಗೂ ಚರಾಸ್ತಿಯನ್ನು ಜಪ್ತಿ ಮಾಡಿದ್ದು, 2022ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ಪ್ರಕರಣ ದಾಖಲಿಸಲಾಗಿದೆ. ಇಡೀ ಜಪ್ತಿ ಮಾಡಿರುವ ಆಸ್ತಿಯಲ್ಲಿ ಪ್ರಸ್ತುತ ಶಿಲ್ಪಾ ಶೆಟ್ಟಿಯ ಹೆಸರಿನಲ್ಲಿರುವ ಮುಂಬೈನ ಜುಹುವಿನಲ್ಲಿರು ರೆಸಿಡೆನ್ಸಿಯಲ್ ಫ್ಲಾಟ್, ಪುಣೆಯಲ್ಲಿರುವ ಬಂಗ್ಲೆ, ರಾಜ್ ಕುಂದ್ರಾ ಹೆಸರಿನಲ್ಲಿರುವ ಇಕ್ವಿಟಿ ಶೇರ್‌ಗಳು ಸೇರಿವೆ.

2017ರಲ್ಲಿ 6600 ಕೋಟಿ ರೂಪಾಯಿಯನ್ನು ರಾಜ್​ ಕುಂದ್ರಾ ಹಾಗೂ ಅವರ ಸಂಗಡಿಗರು ಬಿಟ್​ಕಾಯಿನ್ ಮೂಲಕ ಸಂಪಾದಿಸಿದ್ದರು. ಜೊತೆಗೆ ತಿಂಗಳಿಗೆ ಶೇ. 10 ಪಾವತಿಸುವುದಾಗಿ ಜನರಿಗೆ ಆಮಿಷ ಒಡ್ಡಿದ್ದರು. ಇದನ್ನು ಬೃಹತ್ ಬಿಟ್‌ಕಾಯಿನ್ ಹಗರಣ ಎಂದು ಆರೋಪಿಸಲಾಗಿದೆ. ಬಿಟ್‌ಕಾಯಿನ್ ಪ್ರಕರಣದಿಂದ ರಾಜ್ ಕುಂದ್ರಾ ಪ್ರಸ್ತುತ 150 ಕೋಟಿ ಲಾಭ ಗಳಿಸುತ್ತಿದ್ದಾರೆ ಎಂದು ಇಡಿ ಹೇಳುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!