ಭಾರತೀಯರ ಜೀವನ ಬದಲಾಯಿಸಿದ ಡಿಜಿಟಲ್ ಇಂಡಿಯಾ: ಪಿಯೂಷ್ ಗೋಯಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಕಳೆದ 8 ವರ್ಷಗಳಿಂದ ಹಿಂದೆ ಶುರುವಾದ ಡಿಜಿಟಲ್ ಇಂಡಿಯಾ ಭಾರತೀಯರ ಜೀವನ ಬದಲಾಯಿಸಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದರು.

ಬೆಂಗಳೂರು ನಗರದಲ್ಲಿ ಆಯೋಜಿಸಿದ “ವಿಷನ್ ಇಂಡಿಯಾ@ 2047” ರ ನವೋದಯ ಹಾಗೂ ಉದ್ಯಮಶೀಲತೆ ಕಾರ್ಯಗಾರ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಡಿಜಿಟಲ್ ಇಲ್ಲದೇ ಬದುಕು ಊಹಿಸಲೂ ಸಾಧ್ಯವಾಗಿಲ್ಲ. ಇದರಿಂದ ಕೇವಲ‌ 8 ವರ್ಷಗಳಲ್ಲಿ ನಾವು ಗಟ್ಟಿಯಿದ್ದೇವೆ ಅಂತ ಪ್ರಪಂಚಕ್ಕೆ ತೋರಿಸಿದ್ದೇವೆ. ಹಲವಾರು ಸಮಸ್ಯೆಗಳ ನಡುವೆ ಬದುಕುತ್ತೇವೆ ಅಂತ ಸಾಬೀತು ಪಡಿಸಿದ್ದೇವೆ ಎಂದು ಹೇಳಿದರು.

ಇನ್ನೂ ONGC (Open Network for Digital Commerce) ಬೀಟಾ ಹಂತದಲ್ಲಿದ್ದು, ಬೆಂಗಳೂರಿನಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ನಾವು ಇದನ್ನು ಹಲವೆಡೆ ಬಿಡುಗಡೆ ಮಾಡಲು ತಯಾರಾಗಿದ್ದೇವೆ. ಭಾರತದಲ್ಲಿ ಅತಿ ಹೆಚ್ಚು ಡಿಜಿಟಲ್ ಟ್ರಾನ್ಸಾಕ್ಷನ್ ಬಳಕೆ ಆಗುತ್ತಿದೆ. ಕಳೆದ ತಿಂಗಳಲ್ಲಿ 6 ಬಿಲಿಯನ್ ಡಿಜಿಟಲ್ ಟ್ರಾನ್ಸಾಕ್ಷನ್ ಆಗಿದೆ. ONDC ಎಲ್ಲ ವರ್ಗಗಳಗೂ ಕನೆಕ್ಟ್ ಆಗಲಿದೆ. ಒಎನ್​​ಡಿಸಿ ಎಲ್ಲ ವಲಯಗಳಿಗೂ ಸಹಾಯವಾಗಲಿದೆ. ಆದರೆ ಯಾವಾಗ ಅಂತ್ಯವಾಗುತ್ತೆ ಟೆಸ್ಟಿಂಗ್ ಅಂತ ಹೇಳಲು ಸಾಧ್ಯವಿಲ್ಲ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!