Saturday, July 2, 2022

Latest Posts

ಡಿಜಿಟಲ್ ಸೇವಾ ಕೇಂದ್ರಗಳ ಸೌಲಭ್ಯ ಎಲ್ಲರಿಗೂ ತಲುಪುವಂತಾಗಬೇಕು: ವಸಂತ ಸಾಲ್ಯಾನ್

ದಿಗಂತ ವರದಿ ಸೋಮವಾರಪೇಟೆ:

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೇಂದ್ರ ಸರ್ಕಾರದಿಂದ ನೀಡಲಾಗಿರುವ ಡಿಜಿಟಲ್‌ ಸೇವಾ ಕೇಂದ್ರಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳವಂತಾಗಬೇಕು. ಯೋಜನೆಯ ಕಾರ್ಯಕರ್ತರು ಎಲ್ಲಾ ಸದಸ್ಯರಿಗೂ ಈ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಈ ವ್ಯವಸ್ಥೆ ಸದಸ್ಯರಿಗೆ ತಲುಪುವಂತೆ ಮಾಡಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್ ಸಲಹೆ ಮಾಡಿದರು.
ಯೋಜನೆಯ ಶಾಂತಳ್ಳಿ ವಲಯ ಕಛೇರಿಯಲ್ಲಿ ನೂತನವಾಗಿ ಡಿಜಿಟಲ್‌ ಸೇವಾ ಕಾಮನ್‌ ಸರ್ವೀಸ್‌ ಸೆಂಟರ್‌ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಇದೇ ಸಂದರ್ಭ ಅವರು ಫಲಾನುಭವಿಗೆ ಇ-ಶ್ರಮ್‌ ಕಾರ್ಡ್‌ ವಿತರಣೆ ಮಾಡಿದರು.
ಈ ಸಂದರ್ಭ ಕೊಡಗು ಜಿಲ್ಲಾ ನಿರ್ದೇಶಕರಾದ ಎ.ಯೋಗೀಶ್‌, ತಾಲೂಕು ಯೋಜನಾಧಿಕಾರಿ ಹೆಚ್. ರೋಹಿತ್‌, ಚೌಡ್ಲು ಗ್ರಾಮ ಮಂಚಾಯತ್‌ ಅಧ್ಯಕ್ಷ ಮಹೇಶ್‌ ತಿಮ್ಮಯ್ಯ ಅವರುಗಳು ಮಾತನಾಡಿ, ಈ ಸೌಲಭ್ಯಗಳು ಪ್ರತಿ ಗ್ರಾಮಗಳಲ್ಲೂ ದೊರಕುವಂತಾಗಬೇಕು.ಈ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅಚ್ಚುಕಟ್ಟಾಗಿ ನಿಭಾಯಿಸಿದೆ ಎಂದು ತಿಳಿಸಿದರು.
ಈ ಸಂದರ್ಭ ತಾಲೂಕು ಪಂಚಾಯತ್‌ ಮಾಜಿ ಸದಸ್ಯೆ ತಂಗಮ್ಮ, ಹಾನಗಲ್‌ ಶೆಟ್ಟಳ್ಳಿ ಒಕ್ಕೂಟದ ಅದ್ಯಕ್ಷೆ ಚಂದ್ರಿಕಾ ಧರ್ಮೇಶ್‌, ಹಾನಗಲ್‌ ಗ್ರಾಮ ಪಂಚಾಯತ್‌ ಅದ್ಯಕ್ಷೆ ಲಕ್ಷ್ಮೀ, ಸದಸ್ಯೆ ರೇಣುಕಾ ವೆಂಕಟೇಶ್‌, ಕಲ್ಕಂದೂರು ಗ್ರಾಮ ಪಂಚಾಯತ್‌ ಸದಸ್ಯ ಪ್ರಕಾಶ್‌, ಚೌಡ್ಲು ಗ್ರಾಮ ಪಂಚಾಯತ್‌ ಸದಸ್ಯೆ ಜ್ಯೋತಿ, ವಿಎಲ್ಇ ಆಪರೇಟರ್‌ ಪೂಜಾ, ಶೌರ್ಯ ವಿಪತ್ತು ನಿರ್ವಹಣಾ ಸಂಯೋಜಕ ರಾಮದಾಸ್‌, ವಲಯ ಮೇಲ್ವಿಚಾರಕಿ ಕಲಾವತಿ, ಹಾಗೂ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss