ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿಲ್ ರಾಜು ಅವರ ಮೊದಲ ತಮಿಳು ಚಿತ್ರ ‘ವಾರಿಸು’, ತೆಲುಗಿನಲ್ಲಿ ‘ವಾರಸುಡು’, ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಕಾಲಿವುಡ್ ಹೀರೋ ಇಳಯ ದಳಪತಿ ವಿಜಯ್ ನಟಿಸುತ್ತಿದ್ದಾರೆ. ತೆಲುಗು ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಸಿನಿಮಾ ಕೌಟುಂಬಿಕ ಕಥೆಯಾಗಿ ಮೂಡಿಬರಲಿದೆ. ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದು, ಎಸ್ ಎಸ್ ಥಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. 2023 ರ ಸಂಕ್ರಾಂತಿಯಂದು ಚಿತ್ರವು ತೆಲುಗು ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
ನಿರ್ಮಾಪಕ ದಿಲ್ ರಾಜು ತೆಲುಗಿನಲ್ಲಿ ಸಿನಿಮಾ ಪ್ರಚಾರ ಆರಂಭಿಸಿದ್ದಾರೆ. ಈ ಕ್ರಮದಲ್ಲಿ ಅವರು ಜನಪ್ರಿಯ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದು, ಈ ಸಂದರ್ಶನದಲ್ಲಿ.. ‘ವಾರಸುಡು ಸಿನಿಮಾಗೆ ತೆಲುಗಿನಲ್ಲಿ ಯಾರು ಸೆಟ್ ಆಗಿಲ್ವಾ, ತಮಿಳಿನ ನಾಯಕನನ್ನು ಯಾಕೆ ಮಾಡಿದ್ದೀರ ಎಂಬ ಪ್ರಶ್ನೆಗೆ ದಿಲ್ ರಾಜು ಉತ್ತರಿಸಿದರು. “ಈ ಚಿತ್ರದ ಕಥೆಯನ್ನು ಮೊದಲು ಸೂಪರ್ ಸ್ಟಾರ್ ಮಹೇಶ್ ಬಾಬುಗೆ ಕತೆ ಹೇಳಿದ್ವಿ ಡೇಟ್ ಮ್ಯಾಚ್ ಆಗದ ಕಾರಣ ಮೆಗಾಪವರ್ ಸ್ಟಾರ್ ರಾಮ್ ಚರಣ್ ಅವರಿಗೂ ಕಥೆ ಹೇಳಿದ್ದೆವು. ಆದರೆ ‘ಆರ್‌ಸಿ 15’ ಚಿತ್ರಕ್ಕೆ ಚರಣ್ ಅವರ ಡೇಟ್ಸ್ ಕ್ಲ್ಯಾಶ್ ಆಗುತ್ತಿರುವುದರಿಂದ ಬೇರೆ ದಾರಿಯಿಲ್ಲದೆ ಈ ಕಥೆಯ ನಾಯಕನಿಗಾಗಿ ವಿಜಯ್ ಅವರನ್ನು ಭೇಟಿ ಮಾಡಿದ್ದಾಗಿ ಬಹಿರಂಗಪಡಿಸಿದರು.
ರಾಮ್ ಚರಣ್ ಮತ್ತು ಮಹೇಶ್ ಬಾಬು ಕೈ ಮೀರಿದ ಕಥೆ ವಿಜಯ್ ಗೆ ಗೆಲುವು ತಂದುಕೊಡುತ್ತಾ? ನೋಡಬೇಕು. ಈ ಸಿನಿಮಾಗೆ ಥಿಯೇಟರ್ ಸಮಸ್ಯೆ ಟಾಲಿವುಡ್ ಮಾತ್ರವಲ್ಲ, ಕಾಲಿವುಡ್ ನಲ್ಲೂ ಇದೆ. ತಮಿಳಿನ ಸ್ಟಾರ್ ಹೀರೋ ಅಜಿತ್ ಚಿತ್ರವೂ ಸಂಕ್ರಾಂತಿಯಂದು ಬಿಡುಗಡೆಯಾಗುತ್ತಿದ್ದಂತೆ ‘ವಾರಿಸು’ ಚಿತ್ರಕ್ಕೆ ಸಾಕಷ್ಟು ಥಿಯೇಟರ್ ಸಿಗುತ್ತಿಲ್ಲ.