October 10, 2026
Saturday, October 10, 2026
spot_img

ʼಅವರನ್ನು ಮತ್ತೆ ನೋಡುವವರೆಗೂ ನನ್ನ ಆತ್ಮಕ್ಕೆ ಶಾಂತಿ ಸಿಗಲ್ಲʼ: ದಿಲೀಪ್ ಪತ್ನಿ ಭಾವುಕ ಪೋಸ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಜನಪ್ರಿಯ ನಟ ಮತ್ತು ಯಶಸ್ವಿ ನಿರ್ಮಾಪಕರಾಗಿದ್ದ ದಿಲೀಪ್ ರಾಜ್ ಹಠಾತ್ ನಿಧನವು ಇಡೀ ಕನ್ನಡಿಗರನ್ನು ಆಘಾತಕ್ಕೀಡು ಮಾಡಿದೆ. ಈ ತೀವ್ರ ದುಃಖದ ನಡುವೆಯೇ, ಅವರ ಪತ್ನಿ ಶ್ರೀವಿದ್ಯಾ ರಾಜ್ ತಮ್ಮ ಸಾಮಾಜಿಕ ಜಾಲತಾಣಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಕಷ್ಟದ ಸಮಯದಲ್ಲಿ ಹೆಗಲಾಗಿ ನಿಂತ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ದಿಲೀಪ್ ರಾಜ್ ಅವರೊಂದಿಗಿನ ತಮ್ಮ ಅನ್ಯೋನ್ಯ ದಾಂಪತ್ಯದ ನೆನಪುಗಳನ್ನು ಮತ್ತು ಅವರ ಅನುಪಸ್ಥಿತಿಯಲ್ಲಿ ತಾವು ಅನುಭವಿಸುತ್ತಿರುವ ನೋವನ್ನು ವಿವರಿಸಿದ್ದಾರೆ.

ಪತಿಯ ನೆನಪುಗಳನ್ನು ಕಲೆಯ ರೂಪದಲ್ಲಿ ಜೀವಂತವಾಗಿಡಲು ಸಂಕಲ್ಪ ಮಾಡಿರುವ ಶ್ರೀವಿದ್ಯಾ, ನಾನು ಅವರನ್ನು ಶಾಂತಿಯಿಂದ ಹೋಗಲು ಬಿಡಲು ಮತ್ತು ಹೊಸ ಜೀವನವನ್ನು ಕಂಡುಕೊಳ್ಳಲು ನಿರ್ಧರಿಸಿದ್ದೇನೆ ಎಂದು ಬರೆಯತ್ತಲೇ, ನಾನು ಅವರನ್ನು ಮತ್ತೆ ನೋಡುವವರೆಗೂ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಎಂಬ ಹೃದಯಸ್ಪರ್ಶಿ ಸಾಲುಗಳನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಅಭಿಮಾನಿಗಳ ಕಣ್ಣಂಚಲ್ಲಿ ನೀರು ತರಿಸುತ್ತಿದೆ.

Must Read