ನಾವು ನಮ್ಮ ಮೇಲೆ ವಿಶ್ವಾಸ ಇರಿಸಿಕೊಂಡಿದ್ದರೆ ಯಾವುದೂ ಅಸಾಧ್ಯವಲ್ಲ: ದಿನೇಶ್‌ ಕಾರ್ತಿಕ್‌ ಹೀಗಂದಿದ್ಯಾಕೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್‌ 15ನೇ ಆವೃತ್ತಿಯಲ್ಲಿ ಆರ್‌ಸಿಬಿ ಪರ ಫಿನಿಶರ್‌ ರೋಲ್‌ ನಲ್ಲಿ ಮಿಂಚು ಹರಿಸುತ್ತಿರುವ ವಿಕೆಟ್‌ ಕೀಪರ್‌ ದಿನೇಶ್ ಕಾರ್ತಿಕ್ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಾಗಿ ಭಾರತದ ಟಿ- ಟ್ವೆಂಟಿ ತಂಡದಲ್ಲಿ ದಿನೇಶ್‌ ಕಾರ್ತಿಕ್‌ ಸ್ಥಾನ ಪಡೆದಿದ್ದು, ಬರೋಬ್ಬರಿ ಮೂರು ವರ್ಷಗಳ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್‌ ಗೆ ಮರಳಿದ್ದಾರೆ. ಕಾರ್ತಿಕ್‌ ಈ ಸಂಭ್ರಮವನ್ನು ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ.
ಭಾರತ ತಂಡಕ್ಕೆ ಆಯ್ಕೆಯಾಗಿದ್ದು ಅಪರಿಮಿತ ಸಂತೋಷ, ಹಿಡಿಸಲಾರದಷ್ಟು ತೃಪ್ತಿ ತಂದಿದೆ. ಐಪಿಎಲ್‌ ಹರಾಜಿನಲ್ಲಿ ಆಯ್ಕೆ ಮಾಡಿದ್ದಕ್ಕಾಗಿ ಮತ್ತು ನನ್ನ ಮೇಲೆ ನಂಬಿಕೆ ಇರಿಸಿದ್ದಕ್ಕಾಗಿ ಆರ್‌ಸಿಬಿ ತಂಡಕ್ಕೆ ಋಣಿಯಾಗಿದ್ದೇನೆ. ನೀವು ನಿಮ್ಮ ಮೇಲೆ ವಿಶ್ವಾಸ ಇರಿಸಿಕೊಂಡಿದ್ದರೆ ಯಾವುದೂ ಅಸಾಧ್ಯವಲ್ಲ. ನಿಮ್ಮೆಲ್ಲರ ನಿರಂತರ ಹಾರೈಕೆ ನಂಬಿಕೆಗೆ ಧನ್ಯವಾದಗಳು.. ಭಾರತ ತಂಡಕ್ಕಾಗಿ ನನ್ನ ಕಠಿಣ ಪರಿಶ್ರಮ ಮುಂದುವರೆಯುತ್ತದೆ ಎಂದು ಬರೆದುಕೊಂಡಿದ್ದಾರೆ.

ಆರ್ಸಿಬಿ ಪ್ಲೇಆಫ್ ತಲುಪುವಲ್ಲಿ ದಿನೇಶ್‌ ಕಾರ್ತಿಕ್‌ ಪ್ರಮುಖ ಪಾತ್ರ ವಹಿಸಿದ್ದಾರೆ. ಸೋಲಿನಂಚಿನಲ್ಲಿದ್ದ ಅನೇಕ ಪಂದ್ಯಗಳನ್ನು ಗೆಲ್ಲಿಸಿ ಅಭಿಮಾನಿಗಳ ಪಾಲಿಗೆ ಹೀರೋ ಆಗಿ ಮೆರೆದಿದ್ದಾರೆ. ಭಾರತ ತಂಡದಲ್ಲಿ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿ ರಿಷಭ್‌ ಪಂತ್‌ ಇದ್ದರೂ ತಂಡವು 6 ಅಥವಾ 7 ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಬಲ್ಲ ಫಿನಿಷರ್‌ ಅನ್ನು ಎದುರು ನೋಡುತ್ತಿದೆ. ದ. ಆಫ್ರೀಕಾ ವಿರುದ್ಧದ ಸರಣಿಯಲ್ಲಿ ದಿನೇಶ್‌ ಯಶಸ್ವಿಯಾದರೆ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ.20 ವಿಶ್ವಕಪ್‌ ನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಈವರೆಗೆ 26 ಟೆಸ್ಟ್, 94 ಏಕದಿನ ಹಾಗೂ 32 ಟಿ.20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ದಿನೇಶ್‌ ಕ್ರಮವಾಗಿ 1025, 1752 ಹಾಗೂ 399 ರನ್ ಕಲೆಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!