ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿ20 ಶೃಂಗಸಭೆಯಲ್ಲಿ ಇಂದು ಪ್ರಮುಖ ಸಭೆಗಳುನಡೆದಿದ್ದು, ಇದಾದ ಬಳಿಕ ಇದೀಗ ಔತಣಕೂಟಕ್ಕೆ ಸಜ್ಜಾಗಿದ್ದಾರೆ.
ಭಾರತ್ ಮಂಟಪದಲ್ಲಿ ಆಯೋಜಿಸಲಾದ ಭವ್ಯ ಭೋಜನಕೂಟಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿ ಅವರು ವಿಶ್ವ ನಾಯಕರನ್ನು ಸ್ವಾಗತಿಸುತ್ತಿದ್ದಾರೆ.
ಯುಕೆ ಪ್ರಧಾನಿ ರಿಷಿ ಸುನಕ್ ದಂಪತಿ, ಸಿಂಗಾಪುರ ಪ್ರಧಾನಿ ಲೀ ಸೀನ್ ಲೂಂಗ್ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ವಿವಿಧ ದೇಶಗಳ ನಾಯಕರು ಅಧ್ಯಕ್ಷ ಮುರ್ಮು ಆಯೋಜಿಸಿದ್ದ ಜಿ20 ಔತಣಕೂಟದಲ್ಲಿ ಭಾಗವಹಿಸಲು ಭಾರತ ಮಂಟಪಕ್ಕೆ ಆಗಮಿಸಿದ್ದಾರೆ.