ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ದೇಶ, ಒಂದು ಕುಟುಂಬ ಮತ್ತು ಒಂದು ಭವಿಷ್ಯ ಪರಿಕಲ್ಪನೆಯಡಿ ಜಿ20 ಶೃಂಗ ಸಭೆ ಆಯೋಜಿಸಿರುವುದಕ್ಕೆ ಪ್ರಧಾನಿ ಮೋದಿ (PM Narendra Modi)ಅವರನ್ನು ಅಭಿನಂದಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (US President Joe Biden) ಅವರು ಹೇಳಿದ್ದಾರೆ.
ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಮತ್ತು ಅನೇಕ ವಿಧಗಳಲ್ಲಿಈ ಪರಿಕಲ್ಪನೆ ಈ ಜಿ20 ಶೃಂಗಸಭೆಯ ಕೇಂದ್ರಬಿಂದುವಾಗಿದೆ. ನಾವು ಇಂದು ಮಾತನಾಡುತ್ತಿರುವ ಈ ಪಾಲುದಾರಿಕೆಯ ಅನೇಕ ವಿಧಗಳಲ್ಲಿ ಕೇಂದ್ರಬಿಂದುವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.