September 16, 2026
Wednesday, September 16, 2026
spot_img

Dinner Special | ರುಚಿಯಾದ ಎಗ್ ಬಿರಿಯಾನಿ ಮನೆಲ್ಲೇ ಸುಲಭವಾಗಿ ಮಾಡಿ

ಸಂಜೆ ಊಟಕ್ಕೆ ಏನು ಮಾಡೋದು ಅನ್ನೋ ಪ್ರಶ್ನೆ ಬಂದಾಗ, ಮೊದಲು ನೆನಪಾಗೋದು ಎಗ್ ಬಿರಿಯಾನಿ. ಕಡಿಮೆ ಸಮಯದಲ್ಲಿ ತಯಾರಾಗುವ ಈ ಬಿರಿಯಾನಿ ಬ್ಯಾಚುಲರ್‌ಗಳಿಂದ ಹಿಡಿದು ಫ್ಯಾಮಿಲಿ ಊಟಕ್ಕೂ ಸೂಪರ್ ಆಗಿ ಸೂಟ್ ಆಗುತ್ತದೆ.

ಬೇಕಾಗುವ ಪದಾರ್ಥಗಳು:

ಬೇಯಿಸಿದ ಮೊಟ್ಟೆ – 4
ಬಾಸ್ಮತಿ ಅಕ್ಕಿ – 1 ಕಪ್
ಈರುಳ್ಳಿ – 2
ಟೊಮೆಟೊ – 2
ಹಸಿಮೆಣಸಿನಕಾಯಿ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಮೊಸರು – 2 ಟೇಬಲ್ ಸ್ಪೂನ್
ಖಾರದ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಅರಿಶಿನ – ಚಿಟಿಕೆ
ಪಲಾವ್ ಎಲೆ, ಲವಂಗ, ಏಲಕ್ಕಿ, ಚಕ್ಕೆ – ಸ್ವಲ್ಪ
ಎಣ್ಣೆ/ತುಪ್ಪ – ಅಗತ್ಯಕ್ಕೆ
ಉಪ್ಪು – ರುಚಿಗೆ
ಕೊತ್ತಂಬರಿ, ಪುದೀನಾ – ಅಲಂಕಾರಕ್ಕೆ

ತಯಾರಿಸುವ ವಿಧಾನ:

ಬೇಯಿಸಿದ ಮೊಟ್ಟೆಗಳಿಗೆ ಅರಿಶಿನ, ಖಾರದ ಪುಡಿ, ಉಪ್ಪು ಹಚ್ಚಿ ಸ್ವಲ್ಪ ಎಣ್ಣೆಯಲ್ಲಿ ಹುರಿದು ಪಕ್ಕಕ್ಕೆ ಇಡಿ.

ಕುಕ್ಕರ್‌ನಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ ಪಲಾವ್ ಎಲೆ, ಲವಂಗ, ಏಲಕ್ಕಿ, ಚಕ್ಕೆ ಹಾಕಿ. ನಂತರ ಈರುಳ್ಳಿ ಹಾಕಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ, ಟೊಮೆಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ.

ಖಾರದ ಪುಡಿ, ಧನಿಯಾ ಪುಡಿ, ಗರಂ ಮಸಾಲಾ, ಅರಿಶಿನ ಮತ್ತು ಉಪ್ಪು ಸೇರಿಸಿ. ನಂತರ ಮೊಸರು ಹಾಕಿ ಎಣ್ಣೆ ಬಿಡುವವರೆಗೆ ಚೆನ್ನಾಗಿ ಹುರಿಯಿರಿ.

ಈಗ ನೆನೆಸಿದ ಅಕ್ಕಿ, ಹುರಿದ ಮೊಟ್ಟೆ ಮತ್ತು ಅಗತ್ಯಕ್ಕೆ ನೀರು ಸೇರಿಸಿ. ಕುಕ್ಕರ್‌ನಲ್ಲಿ 1-2 ಸೀಟಿ ಹಾಕಿ ಅಥವಾ ಕಡಿಮೆ ಉರಿಯಲ್ಲಿ ದಮ್ ಮಾಡಿ. ಕೊನೆಗೆ ಕೊತ್ತಂಬರಿ, ಪುದೀನಾ ಮತ್ತು ಫ್ರೈಡ್ ಈರುಳ್ಳಿ ಉದುರಿಸಿ ಬಿಸಿ ಬಿಸಿಯಾಗಿ ರೈತಾದೊಂದಿಗೆ ಸರ್ವ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !