ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದೆಲ್ಲೆಡೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅಧರಲ್ಲೂ ಆಯೋಧ್ಯೆಯಲ್ಲಿ ದೀಪೋತ್ಸವ ಸಡಗರ ಜೋರಾಗಿದೆ. ಬರೋಬ್ಬರಿ 24 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ದಾಖಲೆ ಬರೆಯಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಈ ದಿಪೋತ್ಸವದ ಚಿತ್ರಗಳನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಇದೇ ವೇಳೆ ಮಹತ್ವದ ಸಂದೇಶವನ್ನು ಸಾರಿ ಜೈಶ್ರೀ ರಾಮ್ ಎಂದು ಬರೆದುಕೊಂಡಿದ್ದಾರೆ.
ಆಯೋಧ್ಯೆ ದೀಪೋತ್ಸವದಿಂದ ಹೊರಹೊಮ್ಮುವ ಶಕ್ತಿ ಭಾರದಲ್ಲಿ ಹೊಸ ಉತ್ಸಾಹ, ಶಕ್ತಿ ಹರಡಲಿ. ಭಗವಾನ್ ಶ್ರೀರಾಮ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ನನ್ನ ಎಲ್ಲಾ ಕುಟುಂಬ ಸದಸ್ಯರಿಗೆ ಸ್ಪೂರ್ತಿಯಾಗಲಿ ಎಂದು ಹಾರೈಸುತ್ತೇನೆ. ಜೈ ಶ್ರೀರಾಮ್ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
https://twitter.com/narendramodi/status/1723687613536915503
ಆಯೋಧ್ಯೆಯ ಸರಯು ನದಿ ತಟದಲ್ಲಿ ಬರೋಬ್ಬರಿ 24 ಲಕ್ಷ ದೀಪಗಳನ್ನು ಬೆಳಗಿಸಲಾಗಿದೆ. ಈ ಮೂಲಕ ಗಿನ್ನಿಸೆ ದಾಖಲೆ ಬರೆಯಲಾಗಿದೆ. ಸುಮಾರು 25,000ಕ್ಕೂ ಹೆಚ್ಚು ಸ್ವಯಂ ಸೇವಕರು ದೀಪ ಬೆಳಗಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.