ಇಸ್ರೇಲ್-ಹಮಾಸ್ ನಡುವಿನ ಕದನ: ಗಾಜಾದ ಆಸ್ಪತ್ರೆಯ ಕಾರ್ಡಿಯಾಕ್ ವಾರ್ಡ್ ನಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಸ್ರೇಲ್ ಹಾಗೂ ಹಮಾಸ್ ನಡುವಿನ ಕದನದಿಂದ ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್-ಶಿಫಾವನ್ನು ಇಸ್ರೇಲ್ ಸೇನೆ ಸುತ್ತುವರೆದಿದ್ದು, ಆಸ್ಪತ್ರೆ ಸಮೀಪದಲ್ಲಿ ವೈಮಾನಿಕ ದಾಳಿ ಸೇರಿದಂತೆ ಬಾಂಬ್ ಸ್ಫೋಟಗಳು ನಡೆಯುತ್ತಿರುವುದರಿಂದ ಆಸ್ಪತ್ರೆಯ ಕಾರ್ಡಿಯಾಕ್ ವಾರ್ಡ್ ನಾಶವಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್ ಅಬು ಸಲ್ಮಿಯಾ ಹೇಳಿದ್ದಾರೆ.

ಆಸ್ಪತ್ರೆಯೊಳಗೆ ಶಸ್ತ್ರ ಚಿಕಿತ್ಸೆಯಾದ 600 ರೋಗಿಗಳು, 37 ರಿಂದ 40 ಶಿಶುಗಳು ಮತ್ತು 17 ಜನರು ತೀವ್ರ ನಿಗಾ ಘಟಕದಲ್ಲಿದ್ದು, ಅವರಿಗೆ ನೀರು, ವಿದ್ಯುತ್, ಆಹಾರ ಅಥವಾ ಇಂಟರ್ ನೆಟ್ ದೊರೆಯದಂತಾಗಿದೆ. ಜನರು ಆಸ್ಪತ್ರೆಯ ಆವರಣದಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಶಸ್ತ್ರಚಿಕಿತ್ಸಕ ಮೊಹಮ್ಮದ್ ಒಬೇದ್ ಹೇಳಿದ್ದಾರೆ.

ತಕ್ಷಣವೇ ಕದನ ವಿರಾಮದೊಂದಿ ಈ ರಕ್ತಪಾತವನ್ನು ನಿಲ್ಲಿಸದಿದ್ದರೆ ಅಥವಾ ರೋಗಿಗಳ ವೈದ್ಯಕೀಯ ಸ್ಥಳಾಂತರಿಸುವಿಕೆಯನ್ನು ನಿಲ್ಲಿಸದಿದ್ದರೆ, ಈ ಆಸ್ಪತ್ರೆಗಳು ಶವಾಗಾರವಾಗುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಭಾನುವಾರ ಇಸ್ರೇಲಿ ಪಡೆಗಳು ಮತ್ತು ಹಮಾಸ್ ನಡುವಿನ ಭಾರೀ ಹೋರಾಟದಲ್ಲಿ ಗಾಜಾದ ಆಸ್ಪತ್ರೆಗಳಲ್ಲಿ ಸಾವಿರಾರು ಜನರು ಸಿಕ್ಕಿಬಿದ್ದಿದ್ದಾರೆ. ಕದನ ವಿರಾಮ ಇಲ್ಲದಿದ್ದರೆ ರೋಗಿಗಳಿಗೆ ಸೌಲಭ್ಯ ದೊರೆಯದೆ ಸಾಯುತ್ತಾರೆ ಎಂದು ವೈದ್ಯರು ಮತ್ತು ಸಹಾಯ ಕಾರ್ಯಕರ್ತರು ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!