Saturday, September 23, 2023

Latest Posts

ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ(75) ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಟ್ಟೆ ರಾಮಚಂದ್ರ ಅವರು ಇಂದು ಮುಂಜಾನೆ ತಮ್ಮ ಸ್ವಗೃಹದಲ್ಲೇ ನಿಧನರಾಗಿದ್ದಾರೆ.
ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ.
ವೈಶಾಖದ ದಿನಗಳು ಹಾಗೂ ಅರಿವು ಇವರಿಗೆ ಖ್ಯಾತಿ ತಂದುಕೊಟ್ಟ ಸಿನಿಮಾಗಳು,ಕಟ್ಟೆ ರಾಮಚಂದ್ರ ಅವರು ವಿಷ್ಣುವರ್ಧನ್ ಅವರಿಗೆ ಬಹಳ ಆಪ್ತರಾಗಿದ್ದರು. ನಿರ್ದೇಶನದ ಜತೆ ನಟನೆಯಲ್ಲೂ ಇವರಿಗೆ ಆಸಕ್ತಿ ಇತ್ತು. ಮನೆ ಮನೆ ಕಥೆಯಲ್ಲಿ ಇವರು ಅಭಿನಯಿಸಿದ್ದರು. ರಾಮಚಂದ್ರ ಅವರ ಅಗಲಿಕೆ ಸಿನಿ ಲೋಕಕ್ಕೆ ಅಪಾರ ನೋವು ತಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!