ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿ ಜಗತ್ತಿನಲ್ಲಿ ಹೆಣ್ಣುಮಕ್ಕಳಿಗೆ ಹೆಚ್ಚಿನ ಆಧ್ಯತೆ. ಅವರ ಬ್ಯೂಟಿ, ಗ್ಲಾಮರಸ್ ಲುಕ್ ನಲ್ಲಿ ಇಡೀ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ಒಂದರ ಹಿಂದೆ ಒಂದಂತೆ ಹಿಟ್ ಸಿನಿಮಾಗಳನ್ನು ಕೊಟ್ಟು ದಶಕಗಳ ಕಾಲದಿಂದ ಚಿತ್ರರಂಗದಲ್ಲಿ ತಮ್ಮ ಸ್ಥಾನ ಗಿಟ್ಟಿಸಿಕೊಂಡಿರುವ ನಟಿಯರು ಪಡೆಯೋ ಸಂಭಾವನೆ ಎಷ್ಟು ಗೊತ್ತಾ?
ಅನುಷ್ಕಾ ಶೆಟ್ಟಿ: ಬಾಹುಬಲಿ, ಸೈಜ್ ಜೀರೋ, ಮಿರ್ಚಿ ಸೇರಿ 45ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಈಕೆ ಒಂದು ಸಿನಿಮಾಕ್ಕೆ ಪಡೆಯೋದು ಬರೋಬ್ಬರಿ 4 ಕೋಟಿ ರೂ.
ಸಮಂತಾ ಪ್ರಭು: ಈಗ ಸಖತ್ ಬೇಡಿಕೆಯಲ್ಲಿರುವ ನಟಿಯರಲ್ಲಿ ಸಮಂತಾ ಕೂಡ ಒಬ್ಬರು. ಇತ್ತೀಚೆಗೆ ಹಿಟ್ ಆದ ಊ ಅಂಟವಾ ಮಾಮ.. ಹಾಡಿಗೆ ಬರೋಬ್ಬರಿ 5 ಕೋಟಿ ರೂ. ಸಂಭಾವನೆ ಗಿಟ್ಟಿಸಿಕೊಂಡಿದ್ದರು.
ರಶ್ಮಿಕಾ ಮಂದಣ್ಣ: ಇನ್ನು ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ಇವರು 2 ಕೋಟಿ ಸಂಭಾವನೆ ಪಡೆಯುತ್ತಿದ್ದರು. ಆದರೆ ಬ್ಲಾಕ್ ಬ್ಲಾಸ್ಟರ್ ಹಿಟ್ ಪುಷ್ಪಾ ನಂತರ ಈಗ ತಮ್ಮ ಸಂಭಾವನೆಯನ್ನು 4 ಕೋಟಿಗೆ ಹೆಚ್ಚಿಸಿಕೊಂಡಿದ್ದಾರೆ.
ಕೀರ್ತಿ ಸುರೇಶ್: ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಈಕೆ ಪ್ರತಿ ಚಿತ್ರಕ್ಕೂ 2 ಕೋಟಿ ರೂ ಪಡೆಯುತ್ತಾರೆ.
ಪೂಜಾ ಹೆಗ್ಡೆ: ರಾಧೆ ಶ್ಯಾಮ್ ಚಿತ್ರದ ಮೂಲಕ ತೆರೆ ಮೇಲೆ ರಂಜಿಸಲು ಸಿದ್ಧವಾಗಿರುವ ಇವರು 4 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ನಯನತಾರ: ಬೋಲ್ಡ್ ಲುಕ್ ಹೊಂದಿರುವ ನಟಿ ನಯನತಾರ ಒಂದು ಸಿನಿಮಾಗೆ 3 ಕೋಟಿ ರೂ. ಪಡೆಯುತ್ತಾರೆ.