July 31, 2026
Friday, July 31, 2026
spot_img

ವೆಸ್ಟ್ ಇಂಡೀಸ್ ತಂಡದಲ್ಲಿ ಭಿನ್ನಾಭಿಪ್ರಾಯ? ಕೋಚ್ ಡ್ಯಾರೆನ್ ಸ್ಯಾಮಿ ವಿರುದ್ಧ ಅಲ್ಜಾರಿ ಜೋಸೆಫ್ ಅಸಮಾಧಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದಲ್ಲಿ ಕೋಚ್ ಮತ್ತು ಆಟಗಾರರ ನಡುವಿನ ಭಿನ್ನಾಭಿಪ್ರಾಯ ಮತ್ತೆ ಬಹಿರಂಗವಾಗಿದೆ. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದ ವೇಗಿ ಅಲ್ಜಾರಿ ಜೋಸೆಫ್, ತಮ್ಮ ಗೈರುಹಾಜರಿಯ ಕುರಿತು ಮುಖ್ಯ ಕೋಚ್ ಡ್ಯಾರೆನ್ ಸ್ಯಾಮಿ ನೀಡಿದ ಹೇಳಿಕೆ ವಾಸ್ತವಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.

‘ನನ್ನ ಪರಿಸ್ಥಿತಿ ಮೊದಲೇ ತಿಳಿಸಿದ್ದೆ’

ಅಲ್ಜಾರಿ ಜೋಸೆಫ್ ಅವರ ಪ್ರಕಾರ, ಗಾಯದ ಸಮಸ್ಯೆಯಿಂದ ಟೆಸ್ಟ್ ಸರಣಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಈ ವಿಷಯವನ್ನು ಅವರು ಮುಂಚಿತವಾಗಿಯೇ ಕೋಚ್ ಹಾಗೂ ಕ್ರಿಕೆಟ್ ವೆಸ್ಟ್ ಇಂಡೀಸ್ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೂ ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದಂತೆ ಬಿಂಬಿಸಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

ಕೋಚ್ ಹೇಳಿಕೆಗೆ ಆಟಗಾರನ ತಿರುಗೇಟು

ಟೆಸ್ಟ್ ಸರಣಿಯ ಆಯ್ಕೆ ವೇಳೆ ಮಾತನಾಡಿದ್ದ ಡ್ಯಾರೆನ್ ಸ್ಯಾಮಿ, ಜೋಸೆಫ್ ಸ್ವಯಂಪ್ರೇರಿತವಾಗಿ ಸರಣಿಯಿಂದ ಹಿಂದೆ ಸರಿದಿದ್ದರು ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಜೋಸೆಫ್, ತಾವು ಸಂಪೂರ್ಣ ಫಿಟ್ ಆಗಿರದ ಕಾರಣ ವಿಶ್ರಾಂತಿ ಪಡೆಯಬೇಕಾಯಿತು ಎಂದು ಸ್ಪಷ್ಟಪಡಿಸಿದ್ದು, ತಮ್ಮ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿವಾದಕ್ಕೆ ಹೊಸ ತಿರುವು

ಈ ಬೆಳವಣಿಗೆಯಿಂದ ವೆಸ್ಟ್ ಇಂಡೀಸ್ ತಂಡದೊಳಗಿನ ಸಮನ್ವಯದ ಬಗ್ಗೆ ಪ್ರಶ್ನೆಗಳು ಮೂಡಿವೆ. ಜೋಸೆಫ್ ಅವರ ಹೇಳಿಕೆ ಮತ್ತು ಕೋಚ್ ಪ್ರತಿಕ್ರಿಯೆ ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ ವಿವಾದಕ್ಕೆ ಮಂಡಳಿ ಯಾವ ರೀತಿಯ ಸ್ಪಷ್ಟನೆ ನೀಡಲಿದೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !