ಆಪತ್ತು ತಂದ ನಗ್ನ ಫೋಟೋಶೂಟ್​: ನಟ ರಣವೀರ್​ ವಿರುದ್ಧ ಬೀಳುತ್ತಿದೆ ಕೇಸ್ ಮೇಲೆ ಕೇಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮ್ಯಾಗಜೀನ್ ಕವರ್ ಗಾಗಿ ನಗ್ನ ಫೋಟೋ ಶೂಟ್ ಮಾಡಿಸಿಕೊಂಡ ಬಾಲಿವುಡ್ ನಟ ರಣವೀರ್ ಸಿಂಗ್​ ಸಂಕಷ್ಟ ಒಂದರ ಮೇಲೊಂದರಂತೆ ಬರುತ್ತಿದ್ದು, ಈಗಾಗಲೇ ದೂರು ದಾಖಲಾಗಿದ್ದು, ಇದೀಗ ಮತ್ತೆ ದೂರು ದಾಖಲಾಗಿದೆ.

ಫೋಟೋಗಳಲ್ಲಿ ಸಂಪೂರ್ಣ ನಗ್ನರಾಗಿ ಪೋಸ್ ನೀಡಿರುವ ರಣವೀರ್, ಬರ್ಟ್ ರೆನಾಲ್ಡ್​ ಅವರನ್ನು ಅನುಕರಣೆ ಮಾಡಲು ಪ್ರಯತ್ನಿಸಿದ್ದಾರೆ ಎನ್ನಲಾಗುತ್ತಿದೆ.
ರಣವೀರ್ ಅವರು ಬೋಲ್ಡ್​ ಆಗಿ ಈ ಕೆಲಸ ಮಾಡಿದ್ದಾರೆ ಎಂದು ಕೆಲವರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಮುಂಚೆ ಮುಂಬೈನ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ರಣವೀರ್ ವಿರುದ್ಧ ದೂರು ದಾಖಲಾಗಿತ್ತು. ಈಗ ಮತ್ತಿಬ್ಬರು ದೂರುದಾರರು ದೂರು ಸಲ್ಲಿಸಿದ್ದು, ರಣವೀರ್​ಗೆ ಲೀಗಲ್ ನೋಟಿಸ್ ಕೂಡ ಕಳುಹಿಸಿದ್ದಾರೆ.

ಐಪಿಸಿ ಸೆಕ್ಷನ್​ 292, 293, 297 ಮತ್ತು IT ಆ್ಯಕ್ಟ್​ಗಳಡಿಯಲ್ಲಿ ರಣವೀರ್ ವಿರುದ್ಧ ಪ್ರಕರಣ ದಾಖಲಾಗಿದೆ. ರಣವೀರ್ ಅವರ ನಗ್ನ ಚಿತ್ರಗಳನ್ನು ನೋಡಿ ತನ್ನ ಮನಸ್ಸಿಗೆ ಆಘಾತವಾಗಿದೆ ಹಾಗೂ ನನ್ನ ಭಾವನೆಗಳಿಗೆ ನೋವು ಉಂಟಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.

ದೂರುದಾರರ ವಕೀಲರಾಗಿರುವ ಅಖಿಲೇಶ್ ಚೌಬೇ ಮಾತನಾಡಿ, ಬಹುತೇಕ ಚಿಕ್ಕಮಕ್ಕಳು ನಟನ ಅಭಿಮಾನಿಗಳಾಗಿದ್ದಾರೆ ಮತ್ತು ಅವರು ಮೊಬೈಲ್ ಕೂಡ ಬಳಸುತ್ತಾರೆ. ರಣವೀರ್ ಅವರ ಇಂಥ ಚಿತ್ರಗಳನ್ನು ನೋಡಿದರೆ ಆ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವಾಗಬಹುದು ಮತ್ತು ಇದು ಖಂಡಿತವಾಗಿಯೂ ತಪ್ಪು ಸಂದೇಶವನ್ನು ರವಾನಿಸಬಹುದು. ಅದಕ್ಕಾಗಿಯೇ ನಾವು ದೂರು ಸಲ್ಲಿಸಿದ್ದೇವೆ. ಪ್ರಕರಣ ದಾಖಲಿಸಿಕೊಂಡಿದ್ದಕ್ಕೆ ಮುಂಬೈ ಪೊಲೀಸರಿಗೆ ಥ್ಯಾಂಕ್ಸ್​. ಈಗ ಬಂಧನವೂ ಆಗಲಿ ಎಂದು ಒತ್ತಾಯಿಸಿದ್ದಾರೆ.

ಇನ್ನು ನಗ್ನ ಫೋಟೋಶೂಟ್ ಮುಖಾಂತರ ರಣವೀರ್ ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದಲ್ಲಿ ಮುಂಬೈ ಪೊಲೀಸರಿಗೆ ಎರಡು ದೂರುಗಳು ಸಲ್ಲಿಕೆಯಾಗಿದ್ದು, ಇವುಗಳ ಆಧಾರದಲ್ಲಿ ಎಫ್​ಐಆರ್ ದಾಖಲಿಸಬೇಕೆಂದು ಕೋರಲಾಗಿದೆ. ಎನ್​ಜಿಓ ಒಂದರ ಪ್ರತಿನಿಧಿ ಹಾಗೂ ಮಹಿಳಾ ವಕೀಲರೊಬ್ಬರು ಚೆಂಬೂರ್ ಠಾಣೆಯಲ್ಲಿ ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!