Wednesday, August 17, 2022

Latest Posts

ಉರಗ ರಕ್ಷಕ ವಾವಾ ಸುರೇಶ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಷಕಾರಿ ಹಾವು ಕಚ್ಚಿ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉರಗ ರಕ್ಷಕ ವಾವಾ ಸುರೇಶ್ ಆರೋಗ್ಯ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ನಾಗರಹಾವು ಹಿಡಿದು ಚೀಲದಲ್ಲಿ ಹಾಕುವ ಪ್ರಯತ್ನದಲ್ಲಿದ್ದ ಆಕಸ್ಮಿಕವಾಗಿ ಹಾವು ಸುರೇಶ್ ಕಾಲಿಗೆ ಕಚ್ಚಿದೆ. ತಕ್ಷಣ ಪ್ರಜ್ಞಾಹೀನರಾಗಿದ್ದ ಸುರೇಶ್‌ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರೀ ಗಾತ್ರದ ನಾಗರವಾವು ಒಮ್ಮೆ ವಿಷ ಕಕ್ಕಿದರೆ 20 ಕ್ಕೂ ಹೆಚ್ಚು ಮಂದಿಯ ಪ್ರಾಣ ಹೋಗುವಷ್ಟು ತೀವ್ರತೆ ಹೊಂದಿರುತ್ತದೆ. ಹಾವು ಕಚ್ಚಿದ ಸುರೇಶ್ ಅವರನ್ನು ತೀವ್ರ ನಿಗಾಘಟಕದಲ್ಲಿ ಇರಿಸಿದ್ದು, ಉಸಿರಾಡಲು ವೆಂಟಿಲೇಟರ್ ಬೆಂಬಲ ನೀಡಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!