ಸಂಪುಟ ವಿಸ್ತರಣೆ ಬಗ್ಗೆ ಹೈ ಜೊತೆ ಚರ್ಚೆ, ಸಿಎಂ ಸಿದ್ದು, ಡಿಸಿಎಂ ಡಿಕೆಶಿ ದೆಹಲಿಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್‌ಗೆ ನಾನಾ ತಲೆನೋವುಗಳು ಎದುರಾಗುತ್ತಲೇ ಇದೆ. ಸಿಎಂ ಯಾರು ಡಿಸಿಎಂ ಯಾರು ಎನ್ನುವ ಚರ್ಚೆಗೆ ಐದು ದಿನ ತೆಗೆದುಕೊಂಡ ಕಾಂಗ್ರೆಸ್ ಇದೀಗ ತಮ್ಮ ಸಂಪುಟ ರಚನೆ ಬಗ್ಗೆ ತಲೆಕೆಡಿಸಿಕೊಂಡಿದೆ.

ಮೊದಲ ಹಂತದಲ್ಲಿ ಎಂಟು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೀಗ ಉಳಿದ ಸ್ಥಾನಗಳನ್ನು ಭರ್ತಿ ಮಾಡಿ ಸಂಪೂರ್ಣ ಸರ್ಕಾರ ಮಾಡುವ ಸಮಯ ಬಂದಾಗಿದೆ.

ಈ ಕಾರಣಕ್ಕಾಗಿ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ. ಎಲ್ಲವೂ ಬುಧವಾರದೊಳಗೆ ಫೈನಲ್ ಆಗಲಿದೆ ಎಂದು ಡಿಕೆಶಿ ಹೇಳಿದ್ದು, ಅಂತೆಯೇ ಇಂದು ದೆಹಲಿಗೆ ನಾಯಕರು ತೆರಳಲಿದ್ದಾರೆ.

ಸಂಜೆ ದೆಹಲಿಗೆ ತೆರಳಿ ರಾತ್ರಿಯೇ ಮೀಟಿಂಗ್ ನಡೆಸಿ ನಾಳೆ ವಾಪಾಸಾಗಲಿದ್ದಾರೆ. ಇದರ ಜೊತೆಗೆ ಯಾವ ಸಚಿವನಿಗೆ ಯಾವ ಖಾತೆ ಎನ್ನುವ ಚರ್ಚೆಯೂ ಮುನ್ನೆಲೆಗೆ ಬಂದಿದೆ. ಈಗಾಗಲೇ ಡಿಕೆಶಿ ಹಾಗೂ ಸಿದ್ದರಾಮಯ್ಯ ಪ್ರತ್ಯೇಕವಾದ ಪಟ್ಟಿ ತಯಾರಿಸಿದ್ದು, ಹೈ ಮುಂದೆ ತಮ್ಮ ಆಪ್ಷನ್ಸ್ ಇಡಲಿದ್ದಾರೆ.

ಸಿದ್ದರಾಮಯ್ಯ ಕೆ.ಜೆ ಜಾರ್ಜ್ ಹಾಗೂ ಭೈರತಿ ಸುರೇಶ್ ಜೊತೆ ಚರ್ಚೆ ನಡೆಸಿದ್ದರೆ, ಡಿಕೆಶಿ ಕೆಲ ಹೆಸರುಗಳ ಬಗ್ಗೆ ಪಟ್ಟು ಹಿಡಿದಿದ್ದಾರೆ. ಇಂದು ಹೈ ಎರಡೂ ಪಟ್ಟಿಗಳನ್ನು ಪರಿಷ್ಕರಿಸಿ ಒಂದು ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಬಾರಿ ಕೆಲ ಅಚ್ಚರಿಯ ಹೆಸರುಗಳು ಸೇರು ಸಾಧ್ಯತೆ ಇದೆ. ಯಾರ‍್ಯಾರು ಸಚಿವರಾಗುತ್ತಾರೆ? ಕಾದುನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!