ಉಚಿತವಾಗಿ ಜನೌಷಧ ಕಿಟ್ ವಿತರಣೆ: ಜನರಲ್ಲಿ ಜಾಗೃತಿ 

ದಿಗಂತ ವರದಿ ಮೈಸೂರು: 

ದೇಶಾದ್ಯಂತ ಜನೌಷಧಿ ಕೇಂದ್ರ ಪ್ರಾರಂಭವಾಗಿ ಇಂದಿಗೆ 5 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಗುರುವಾರ ಮೈಸೂರಿನ ಕ್ಯಾತಮಾರನಹಳ್ಳಿ ಯಲ್ಲಿರುವ ಜನೌಷಧಿ ಕೇಂದ್ರ ರಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಜನೌಷಧಿ ಕಿಟ್ ಗಳನ್ನು ಕೊಡುವ ವಿತರಿಸುವ ಜನೌಷಧಿ ಬಗ್ಗೆ ಜಾಗೃತಿ ಮೂಡಿಸಿ, ಅರ್ಥಪೂರ್ಣವಾಗಿ 5 ವರ್ಷದ ವಾರ್ಷಿಕೋತ್ಸವ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಎನ್.ಆರ್.ಕ್ಷೇತ್ರದ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಲೋಹಿತ್, ಜನ ಔಷಧಿ ಕೇಂದ್ರ ಬಡವರ ಆಶಾಕಿರಣ. ಬಡವರಿಗೆ ಕಡಿಮೆ ದರದಲ್ಲಿ ಔಷಧಿ ನೀಡಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಕನಸು, ನನಸಾಗಿದೆ.
ಇಂದಿನ ದಿನಗಳಲ್ಲಿ ಔಷಧಿಗಳ ವ್ಯಾಪಾರೀಕರಣ ಹೆಚ್ಚಾಗಿದೆ. ಒಂದೊAದು ಕಂಪನಿಯ ಒಂದೊAದು ಔಷಧಿಗಳಿಂದಾಗಿ ಜನರಲ್ಲಿ ಗೊಂದಲ ಇದೆ. ಇದನ್ನು ಮನಗಂಡು ಪ್ರಧಾನಿ ಮೋದಿಯವರು ಜನ ಔಷಧಿ ಕೇಂದ್ರವನ್ನು ಜಾರಿಗೆ ತಂದಿದ್ದಾರೆ ಎಂದರು.
ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರದಲ್ಲಿ ಔಷಧಿಗಳು ಕಡಿಮೆ ದರದಲ್ಲಿ ಸಿಗುತ್ತಿವೆ. ಇದು ಮಹತ್ವಾಕಾಂಕ್ಷಿ ಯೋಜನೆ. ಬರುವ ದಿನಗಳಲ್ಲಿ ಎಲ್ಲ ಕಡೆಗೂ ಜನ ಔಷಧಿ ಕೇಂದ್ರಗಳು ತೆರೆದರೆ ಬಡವರಿಗೆ ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮೈಸೂರು ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿU ಭರತ್, ಉಪಾಧ್ಯಕ್ಷರಾದ ಕಾರ್ತಿಕ್ ಮರಿಯಪ್ಪ, ಮೈಸೂರು ನಗರ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಣಿರತ್ನಂ, ನಗರ ಕಾರ್ಯಕಾರಣಿ ಸದಸ್ಯ ಇಂದ್ರೇಶ್, ಎನ್ ಆರ್ ಕ್ಷೇತ್ರದ ಎಸ್ಟಿ ಮೋರ್ಚಾ ಕಾರ್ಯದರ್ಶಿ ಮೂರ್ತಿ, ಕ್ಷೇತ್ರದ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ಶೆಟ್ಟಿ , ಧನರಾಜ್, ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!