ಪಕ್ಷದಲ್ಲಿ ಕಡೆಗಣನೆ ಸತ್ಯಕ್ಕೆ ದೂರವಾದ ಮಾತು: ಬಿ.ವೈ.ವಿಜಯೇಂದ್ರ

ಹೊಸದಿಗಂತ ವರದಿ,ಗದಗ :

ಬಿಜೆಪಿಯಲ್ಲಿ ನನ್ನ ಕಡೆಗಣನೆ ಅನ್ನುವ ಪ್ರಶ್ನೆಯೇ ಇಲ್ಲ, ಪಕ್ಷ ನನಗೆ ರಾಜ್ಯ ಉಪಾಧ್ಯಕ್ಷ ಜವಾಬ್ದಾರಿ ನೀಡಿದೆ. ರಾಜ್ಯದಲ್ಲಿ ಪ್ರವಾಸ ಮಾಡಿದಾಗ ಯಡಿಯೂರಪ್ಪನವರ ಮಗ ಎನ್ನುವ ಕಾರಣಕ್ಕೆ ಜನರು ಪ್ರೀಯಿಂದ ಕಾಣುತ್ತಿದ್ದಾರೆ. ನಾನು ಪಕ್ಷ ಕೊಟ್ಟ ಜವಾಬ್ದಾರಿಯಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೆನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಹೇಳಿದರು.

ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪನವರು ಸಿಎಂ ಸ್ಥಾನದಿಂದ ಇಳಿದ ಮೇಲೆ ವಿಜಯೇಂದ್ರ ಹಿನ್ನಲೆಗೆ ಸರಿಯುತ್ತಾರೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ. ಪಕ್ಷದ ಕಾರ್ಯಕರ್ತರು ನನ್ನನ್ನು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ನೇತೃತ್ವದಲ್ಲಿ ಪಕ್ಷವನ್ನು ಸಂಘಟನೆ ಮಾಡಲಾಗುತ್ತಿದೆ ಎಂದರು.

ರೆಡ್ಡಿ ಪಕ್ಷ ಯಡಿಯೂರಪ್ಪನವರ ಬಿ ಟೀಮ್ ಎನ್ನುವ ಕುರಿತು ಮಾತನಾಡಿದ ಅವರು ಯಡಿಯೂರಪ್ಪ ಅವರದು ನೇರ ರಾಜಕೀಯ ಎದೆಗಾರಿಕೆ ಇದ್ದವರು. ಯಡಿಯೂರಪ್ಪ ಹಾಗೂ ಅವರ ನಾಯಕತ್ವದ ಬಗ್ಗೆ ವಿಪಕ್ಷಗಳು ಕೂಡ ಒಳ್ಳೆಯ ಮಾತನಾಡಿದ್ದಾರೆ. ಜನಾರ್ದನ ರೆಡ್ಡಿ ಅವರು ಕೂಡ ಯಡಿಯೂರಪ್ಪವರ ಬಗ್ಗೆ ಒಳ್ಳೆಯ ಮಾತನಾಡಿದ್ದಾರೆ.
ಅದರರ್ಥ ಯಡಿಯೂರಪ್ಪನವರ ಬೆಂಬಲ ಇದೆ ಅಂತಲ್ಲ, ಬೆಂಬಲ ಇದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಯಡಿಯೂರಪ್ಪನವರು ರಾಜಕೀಯ ಜೀವನದಲ್ಲಿ ಯಾವತ್ತೂ ಹಿಂದಿನಿಂದ ರಾಜಕೀಯ ಮಾಡಿದವರು ಅಲ್ಲ ಎಂದರು.

ಮಹದಾಯಿ ವಿಚಾರದಲ್ಲಿ ರಾಜ್ಯದ ಎಲ್ಲ ಬಿಜೆಪಿ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಿ ಕೇಂದ್ರ ನಾಯಕರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗುವ ಮೂಲಕ ಈ ಭಾಗದ ಜನರ ಜೀವನಾಡಿ ಸಮಸ್ಯೆಗೆ ಉತ್ತರ ಕಂಡು ಕೊಂಡಂತಾಗಿದೆ. ಸಿ.ಎಂ. ಘೋಷಣೆ ಮಾಡಿದ ನಿಟ್ಟಿನಲ್ಲಿ ಸರ್ಕಾರ ಸಾಗುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!