ನಿಮ್ಮಂಥವರು MLA ಆಗಿರೋದೇ ಸದನಕ್ಕೆ ಅಗೌರವ: ಕಾಂಗ್ರೆಸ್ ವಿರುದ್ಧ ಸ್ಪೀಕರ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿದ್ದರಾಮಯ್ಯ (Siddaramaiah) ವಿರುದ್ಧ ಸಚಿವ ಅಶ್ವಥ್ ನಾರಾಯಣ (Ashwath Narayan) ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಸದಸ್ಯರು ಸದನದಲ್ಲಿಂದು ಗದ್ದಲ ಶುರು ಮಾಡಿದ್ದಾರೆ.

ಶಾಸಕ ಈಶ್ವರ್ ಖಂಡ್ರೆ (Eshwara Khandre) ಸೇರಿದಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಸ್ಪೀಕರ್ ವಿಶ್ವೇಶ್ವರ ಹೆಗ್ಡೆ ಕಾಗೇರಿ (Vishweshwar Hegde Kageri) ವಿರುದ್ಧ ಅಸಮಾಧಾನ ಹೊರಹಾಕಿದರು. ಇದರಿಂದ ಸಭಾಧ್ಯಕ್ಷರು ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು.

ಇದಕ್ಕೂ ಮುನ್ನ ಮಾತನಾಡಿ ಕಾಗೇರಿ, ಯು.ಟಿ ಖಾದರ್ (UT Khader), ಈಶ್ವರ್ ಖಂಡ್ರೆ ಈ ವಿಷಯವನ್ನು ಶೂನ್ಯ ವೇಳೆಯಲ್ಲಿ ಮಾತನಾಡಿ, ಸದನಕ್ಕೆ ಗೌರವ ಕೊಡಿ. ನಿಮ್ಮ ಹಿರಿತನಕ್ಕೆ ತಕ್ಕಂತೆ ನಡೆದುಕೊಳ್ಳಿ, ನನ್ನ ಅಧಿಕಾರವನ್ನು ಪೂರ್ಣ ಚಲಾಯಿಸಲು ಅವಕಾಶ ಕೊಡಬೇಡಿ. ಸುಮ್ಮನೆ ಕೂರದಿದ್ದರೇ ನಿಮ್ಮನ್ನು ಸದನದಿಂದ ಹೊರಗೆ ಹಾಕಬೇಕಾಗುತ್ತೆ ಎಂದು ಎಚ್ಚರಿಕೆ ಕೊಟ್ಟರು.

ಇದು ನಿಮಗೆ ಶೋಭೆ ತರಲ್ಲ. ಈ ರೀತಿ ಮಾತನಾಡುವುದು ಗೌರವ ತರಲ್ಲ. ನಿಮ್ಮನ್ನು ಯಾರು ಶಾಸಕರಾಗಿ ಆಯ್ಕೆ ಮಾಡಿದವರು? ನಿಮ್ಮಂಥವರು ಎಂಎಲ್‌ಎ ಆಗಿರೋದು ಈ ವ್ಯವಸ್ಥೆಗೆ ಅಗೌರವ ಎಂದರು. ಇದಕ್ಕೆ ಉತ್ತರಿಸಿದ ಖಂಡ್ರೆ, ನಾನು ಅತಿಯಾಗಿ ನಡೆದುಕೊಂಡಿಲ್ಲ. ನೀವು ನನಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ ಎಂದರು. ಮತ್ತಷ್ಟೂ ಅಸಮಾಧಾನಗೊಂಡ ಸ್ಪೀಕರ್ ಇನ್ನೊಂದು ಹೆಜ್ಜೆ ಮುಂದಾದರೆ ಹೊರಗಡೆ ಹಾಕಬೇಕಾಗುತ್ತೆ, ಹಾಕ್ಲಾ ಎಂದು ಎಚ್ಚರಿಕೆ ಕೊಟ್ಟರು. ನಂತರ ಸದನವನ್ನು ಮುಂದೂಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!