ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ (Ukraine) ಸೇನೆಯು ತನ್ನ ರಾಜಧಾನಿಯ ವಾಯುನೆಲೆಯ ಮೇಲೆ ಹಾರಾಟ ನಡೆಸುತ್ತಿದ್ದ ರಷ್ಯಾದ (Russia) 6 ಸ್ಪೈ ಬಲೂನ್ಗಳನ್ನು (Balloons)ಹೊಡೆದುರುಳಿಸಿದೆ.
ಉಕ್ರೇನ್ ಸೇನೆ (Ukraine Military) ಎಚ್ಚರಿಕೆ ನೀಡಿದರೂ ಬಲೂನ್ಗಳು ರಾಜಧಾನಿಯ ಮೇಲೆ ಹಾರಾಟ ನಡೆಸುತ್ತಿದ್ದವು. ಹಾಗಾಗಿ ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಮಿಲಿಟರಿ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾ ತನ್ನ ಡ್ರೋನ್ಗಳ (Drone) ದಾಸ್ತಾನನ್ನು ರಕ್ಷಿಸುವ ಸಲುವಾಗಿ ಮುಂದಿನ ದಾಳಿಯಲ್ಲಿ ಬಲೂನ್ಗಳನ್ನು ಬಳಸಬಹುದು ಎಂದು ವಾಯುಪಡೆಯ ವಕ್ತಾರ ಯೂರಿ ಇಹ್ನಾತ್ ಈ ಹಿಂದೆಯೇ ಹೇಳಿದ್ದರು. ಅದರಂತೆ ರಷ್ಯಾ ಒರ್ಲಾನ್-10 (Orlan-10 Drone) ನಂತಹ ಡ್ರೋನ್ಗಳನ್ನು ಈಗ ಮಿತವಾಗಿ ಬಳಸುತ್ತಿದೆ ಎಂದು ಹೇಳಲಾಗಿದೆ.
ಇತ್ತೀಚೆಗಷ್ಟೇ ಅಮೆರಿಕದ ವಾಯುನೆಲೆಯ ಮೇಲೆ ಹಾರಾಟ ನಡೆಸುತ್ತಿದ್ದ ಚೀನಾದ ಬೇಹುಗಾರಿಕಾ ಬಲೂನ್ವೊಂದನ್ನು ಅಮೆರಿಕ ಫೈಟರ್ ಜೆಟ್ಗಳು ಹೊಡೆದುರುಳಿಸಿದ್ದವು.