ಕೊರೋನಾ ಸೋಂಕಿತರ ಪತ್ತೆ ಕಾರ್ಯದ ವೇಳೆ ಅಡ್ಡಿ: 375 ಆರೋಪಿಗಳ ವಿರುದ್ಧದ ಪ್ರಕರಣ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಪಾದರಾಯನಪುರ(Padarayanapura)ದಲ್ಲಿ ಕೊರೋನಾ ಸೋಂಕಿತರ ಪತ್ತೆ ಕಾರ್ಯದ ವೇಳೆ ಬಿಬಿಎಂಪಿ ಮತ್ತು ಆಶಾ ಕಾರ್ಯಕರ್ತೆಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನಲೆ 375 ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹೈಕೋರ್ಟ್ (High Court) ರದ್ದುಪಡಿಸಿದೆ.

2020 ರ ಏಪ್ರಿಲ್​.19 ರಂದು ಕೋವಿಡ್ 19 ಸೋಂಕಿತರ ಪತ್ತೆ ಕಾರ್ಯದ ವೇಳೆ ಅಡ್ಡಿಪಡಿಸಿ ಬೆದರಿಕೆ ಹಾಕಿ, ಟೇಬಲ್, ಟೆಂಟ್ ಕಿತ್ತೆಸೆದು ದಾಂಧಲೆ ನಡೆಸಿದ ಆರೋಪವಿತ್ತು. ನವಾಜ್ ಪಾಷಾ ಸೇರಿ 375 ಆರೋಪಿಗಳ ವಿರುದ್ಧ ಡಿಸಾಸ್ಟರ್ ಮ್ಯಾನೇಜ್ ಮೆಂಡ್ ಕಾಯ್ದೆ, ಐಪಿಸಿ ಸೆಕ್ಷನ್​ 188 ಅಡಿ ಪ್ರಕರಣ ದಾಖಲಾಗಿತ್ತು. ಸಕ್ಷಮ ಪ್ರಾಧಿಕಾರಿ ಖಾಸಗಿ ದೂರು ದಾಖಲಿಸದ ಹಿನ್ನೆಲೆ ನ್ಯಾಯಮೂರ್ತಿ.ಕೆ.ನಟರಾಜನ್ ತಾಂತ್ರಿಕ ಕಾರಣಗಳಿಂದ ಕೇಸ್ ರದ್ದುಪಡಿಸಿ ಆದೇಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!