ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಸಿನಿಮಾ ಇಂಡಸ್ಟ್ರಿಯ ಸಮಂತಾ ಹಾಗೂ ನಾಗಚೈತನ್ಯ ದಂಪತಿ ವಿಚ್ಛೇದನ ಪಡೆದು ಎರಡೂವರೆ ವರ್ಷಗಳಾಗುತ್ತ ಬಂದರೂ ಈಗಲೂ ಇವರಿಬ್ಬರು ದೂರಾಗಿರುವ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿರುತ್ತಾರೆ. ಈ ಜೋಡಿ ಮತ್ತೆ ಒಂದಾಗಬೇಕೆಂದು ಬಯಸುತ್ತಾರೆ.
ಇತ್ತ ಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯೂಸಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟಿ ಸಮಂತಾ ನಟನೆಯಿಂದ ಗ್ಯಾಪ್ ತೆಗೆದುಕೊಂಡಿದ್ದು, ಬಹಳ ದಿನಗಳಿಂದ ಅವರ ನಟನೆಯ ಚಿತ್ರ, ವೆಬ್ ಸೀರೀಸ್ ಯಾವುದು ತೆರೆಕಂಡಿಲ್ಲ. ಸಿನಿಮಾಗಳ ಹೊರತಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.
ಇದೀಗ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಸಮಂತಾ ಹಾಗೂ ನಾಗಚೈತನ್ಯ ಅಮೆಜಾನ್ ಪ್ರೈಮ್ನಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ವೆಬ್ಸೀರೀಸ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಸಮಂತಾ ನಟಿಸಿರುವ ಸಿಟಾಡೆಲ್ ಹನಿ ಬನಿ ಕೂಡ ಅಮೇಜಾನ್ ಪ್ರೈಂ ವಿಡಿಯೋ ಮೂಲಕವೇ ಪ್ರಸಾರಕ್ಕೆ ಸಜ್ಜಾಗುತ್ತಿದೆ. ಇದೀಗ ಅಮೆಜಾನ್ ಪ್ರೈಂ ಮಾರ್ಚ್ 19ರಂದು ಮುಂಬೈನಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದು, ಸಮಂತಾ, ನಾಗ ಚೈತನ್ಯ, ವರುಣ್ ಧವನ್ ಮುಂತಾದ ಕಲಾವಿದರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.
Spotted: Samantha Ruth Prabhu and ex-husband Naga Chaitanya together at the same event! Setting a new standard for amicable exes 💫 #SamanthaRuthPrabhu #NagaChaitanya #ExGoals pic.twitter.com/NniZEz97Pp
— Media Buzz (@brain_bursts_) March 19, 2024
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಮಂತಾ ಹಾಗೂ ನಾಗಚೈತನ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಈ ಇಬ್ಬರು ಒಟ್ಟಾಗಿ ಕಾಣಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ. ಇಬ್ಬರ ಫೋಟೋಗಳನ್ನು ಅಕ್ಕ-ಪಕ್ಕ ಇಟ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಇದನ್ನು ನೋಡಿದ ಅಭಿಮಾನಿಗಳಿಗೆ ಸಂತಸ ವ್ಯಕ್ತಪಡಿಸಿದ್ದು, ಇದೇ ರೀತಿ ಅವರಿಬ್ಬರು ಮತ್ತೊಮ್ಮೆ ಒಂದಾಗಲಿ ಎಂದು ಅಭಿಮಾನಿಗಳು ಅಪೇಕ್ಷಿಸುತ್ತಿದ್ದಾರೆ.
ನಾಗ ಚೈತನ್ಯ ನಟಿಸಿದ ‘ಧೂತ’ ವೆಬ್ ಸಿರೀಸ್ ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಹಾಗೆಯೇ ಸಮಂತಾ ನಟನೆಯ ‘ದಿ ಫ್ಯಾಮಿಲಿ ಮ್ಯಾನ್ 2’ ಕೂಡ ಇದೇ ಒಟಿಟಿಯಲ್ಲಿ ಯಶಸ್ವಿ ಶೋ ಎನಿಸಿಕೊಂಡಿದೆ.