ಪಾಕಿಸ್ತಾನದ ಸಂಸತ್ತು ವಿಸರ್ಜನೆ: ಹಂಗಾಮಿ ಪ್ರಧಾನಿ ಆಯ್ಕೆಯ ಚರ್ಚೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ‘ನ್ಯಾಷನಲ್‌ ಅಸೆಂಬ್ಲಿ’ (ಸಂಸತ್ತಿನ ಕೆಳಮನೆ)ಯನ್ನು ಅಧ್ಯಕ್ಷ ಆರೀಫ್‌ ಅಲ್ವಿ ಬುಧವಾರ ರಾತ್ರಿ ಅಧಿಕೃತವಾಗಿ ವಿಸರ್ಜಿಸಿದ್ದು, ಇದರ ಬೆನ್ನಿಗೇ, ಹಂಗಾಮಿ ಪ್ರಧಾನಿ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ.

‘ನ್ಯಾಷನಲ್‌ ಅಸೆಂಬ್ಲಿ’ಯ ವಿರೋಧ ಪಕ್ಷದ ನಾಯಕ, ಪಿಟಿಐನ ರಾಜಾ ರಿಯಾಜ್‌ ಅವರೊಂದಿಗೆ ಪ್ರಧಾನಿ ಶೆಹಬಾಜ್‌ ಷರೀಫ್‌ ಹಂಗಾಮಿ ಪ್ರಧಾನಿ ಆಯ್ಕೆಗಾಗಿ ತಮ್ಮ ನಿವಾಸದಲ್ಲಿ ಗುರುವಾರ ಮಾತುಕತೆ ನಡೆಸಿದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ರಿಯಾಜ್‌, ‘ನನ್ನ ತಲೆಯಲ್ಲಿ ಮೂವರ ಹೆಸರುಗಳಿವೆ’ ಎಂದು ಮಾತ್ರ ಹೇಳಿದರು.

ನಿವೃತ್ತ ರಾಜತಾಂತ್ರಿಕ ಅಧಿಕಾರಿ ಜಲೀಲ್‌ ಅಬ್ಬಾಸ್‌ ಜಿಲಾನಿ, ನಿವೃತ್ತ ಮುಖ್ಯನ್ಯಾಯಮೂರ್ತಿ ತಸ್ಸದಖ್‌ ಹುಸೇನ್‌ ಜಿಲಾನಿ (ಪಾಕಿಸ್ತಾನ್‌ ಪೀಪಲ್‌ ಪಾರ್ಟಿಯ ಶಿಫಾರಸು), ಸಿಂಧ್‌ ಪ್ರಾಂತ್ಯದ ಕಮ್ರಾನ್‌ ತಿಸ್ಸೋರಿ (ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್‌ ಪಾಕಿಸ್ತಾನದ ಶಿಫಾರಸು) ಅವರ ಹೆಸರುಗಳು ಪ್ರಸ್ತಾಪವಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ‘ಪಾಕಿಸ್ತಾನ್‌ ಮುಸ್ಲಿಮ್‌ ಲೀಗ್‌-ನವಾಜ್‌’ ಪಕ್ಷದಿಂದ ಈ ವರೆಗೆ ಬಹಿರಂಗವಾಗಿ ಯಾವ ಹೆಸರೂ ಘೋಷಣೆಯಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!