Monday, September 25, 2023

Latest Posts

ಸುಪ್ರೀಂ ಕೋರ್ಟ್ ಪ್ರವೇಶಕ್ಕೆ ಇ-ಪಾಸ್‌ ನೀಡುವ ‘ಸುಸ್ವಾಗತಂ’ ಪೋರ್ಟಲ್‌ ಆರಂಭ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಸುಪ್ರೀಂ ಕೋರ್ಟ್‌ ಪ್ರವೇಶಿಸಲು ಬೇಕಾದ ಪಾಸ್‌ಗಾಗಿ ಇನ್ನು ಮುಂದೆ ಸರದಿಯಲ್ಲಿ ನಿಲ್ಲುವ ಅಗತ್ಯವಿಲ್ಲ. ಇದಕ್ಕಾಗಿ ಆನ್‌ಲೈನ್‌ ಮೂಲಕ ಇ-ಪಾಸ್‌ ನೀಡುವ ‘ಸುಸ್ವಾಗತಂ’ ಪೋರ್ಟಲ್‌ ಅನ್ನು ಆರಂಭಿಸಲಾಗಿದೆ.

ಸಂವಿಧಾನದ 370ನೇ ವಿಧಿಯಡಿ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದ ಕೇಂದ್ರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು ಪೋರ್ಟಲ್‌ ಆರಂಭಿಸಿರುವುದಾಗಿ ಗುರುವಾರ ಘೋಷಿಸಿದೆ.

ವೆಬ್‌ ಆಧಾರಿತ ಪೋರ್ಟಲ್‌ ಮೊಬೈಲ್‌ ಸ್ನೇಹಿ ಆಗಿದ್ದು, ವಿಚಾರಣೆಗೆ ಹಾಜರಾಗಲು ಹಾಗೂ ವಕೀಲರನ್ನು ಭೇಟಿಯಾಗಲು ನ್ಯಾಯಾಲಯಕ್ಕೆ ಬರುವವರು ಇದರ ಮೂಲಕ ಇ-ಪಾಸ್‌ಗೆ ನೋಂದಣಿ ಮಾಡಬಹುದು ಎಂದು ಡಿ.ವೈ. ಚಂದ್ರಚೂಡ್‌ ಅವರು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!